ತಿರುವನಂತಪುರ: ಸೋಮವಾರದಿಂದ ರಾಜ್ಯದಲ್ಲಿ ಶಾಲೆಗಳು ಪುನರಾರಂಭಗೊಳ್ಳಲಿವೆ. ಹಿಂದಿನ ಮಾರ್ಗಸೂಚಿಯಂತೆ ಶಾಲೆಯನ್ನು ತೆರೆಯಲಾಗುವುದು ಎಂದು ಸಚಿವ ವಿ.ಶಿವಂಕುಟ್ಟಿ ತಿಳಿಸಿರುವರು.
ಒಂದರಿಂದ ಒಂಭತ್ತರವರೆಗೆ ತರಗತಿಗಳು 14ರಂದು ಆರಂಭವಾಗಲಿವೆ. ತರಗತಿಗಳು ಮಧ್ಯಾಹ್ನದವರೆಗೆ ಮಾತ್ರ ನಡೆಯಲಿವೆ. ಇನ್ನಷ್ಟು ಚರ್ಚೆಗಳ ಬಳಿಕ ಸಂಜೆಯವರೆಗೆ ವಿಸ್ತರಿಸುವ ತೀರ್ಮಾನ ಕ್ಯೆಗೊಳ್ಳಲಾಗುವುದು. ಇದಕ್ಕಾಗಿ ನಾಳೆ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಹಾಗೂ ಮಂಗಳವಾರ ಶಿಕ್ಷಘಗಳೊಂದಿಗೆ ಸಭೆ ನಡೆಸಲಾಗುವುದು.




