ಕೊಚ್ಚಿ; ಐಷಾರಾಮಿ ಪ್ರವಾಸಿ ಬಸ್ಸುಗಳನ್ನು ಆರ್ಥಿಕ ಸಂಕಷ್ಟದ ಕಾರಣ ಮಾಲೀಕರ ಮಾರಾಟ ಮಾಡುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿದೆ. ರಾಯಲ್ ಟ್ರಾವೆಲ್ಸ್ ಮಾಲೀಕ ರಾಯ್ಸನ್ ಜೋಸೆಫ್ ಅವರು ಬಸ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಜೋಸೆಫ್ ಕೊರೋನಾ ಕಾಲದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಸಾಲದ ಬಾಕಿ ಪಾವತಿಸಲು ಸಾಧ್ಯವಾಗದ ಕಾರಣ 20 ಬಸ್‌ಗಳಲ್ಲಿ ಹತ್ತನ್ನು ಮಾರಾಟ ಮಾಡಲಾಗಿದೆ. ಬಸ್ ಗಳೊಂದೊಂದನ್ನೂ ಕೆಜಿಗೆ 45 ರೂ.ಗೆ ಮಾರಾಟ ಮಾಡಲಾಗಿದೆ. ಕಷ್ಟಪಟ್ಟು ಖರೀದಿಸಿದ ಬಸ್ಸುಗಳನ್ನು ಸಂಕಷ್ಟದ ಕಾರಣ ಮಾರುತ್ತಿರುವುದಾಗಿ ತಿಳಿಸಿದ್ದಾರೆ. 44,000 ರೂ.ತೆರಿಗೆ ಪಾವತಿಸಿದ ವಾಹನಗಳನ್ನು ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು ಮತ್ತೆ ಪಾವತಿಸಬೇಕಾಗಿದೆ. ಹಣ ಸಾಲ ನೀಡಿದವರು ಮನೆಗೆ ಬಂದು ಬೆಳಗ್ಗೆ ಎದ್ದೇಳುವ ಮೊದಲೇ ಬಾಗಿಲುಬಡಿಯುತ್ತಿದ್ದಸರೆ ಎಂದು ಅವಲತ್ತುಕೊಂಡಿರುವರು.
ಬದಲಾಗುತ್ತಿರುವ ಕೊರೋನಾ ನಿರ್ಬಂಧಗಳು ಮತ್ತು ವಿವಾಹ, ಪ್ರವಾಸ ಅಥವಾ ಇತರ ವ್ಯವಹಾರದ ಕುಸಿತ ಹೆಚ್ಚು ದಿಗ್ಭ್ರಮೆಯನ್ನು ಉಂಟುಮಾಡಿದೆ ಎಂದು ರಾಯ್ಸನ್ ಹೇಳುತ್ತಾರೆ. ಅಕ್ಕಿ ಕೊಳ್ಳಲು ಬಸ್ಸು ಮಾರಬೇಕು. ಇಂದು ಪರಿಚಿತರೂ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಮತ್ತು ಹಣಕಾಸು ವ್ಯವಹಾರದ ದೊಡ್ಡ ವ್ಯವಸ್ಥೆಯ ಹೆಣಗಾಡುತ್ತಿದ್ದಾರೆ ಎಂದು ರಾಯ್ಸನ್ ಹೇಳುತ್ತಾರೆ. ಕಳೆದ ಎರಡು ವರ್ಷಗಳಿಂದ ಸಾಕಷ್ಟು ಒತ್ತಡದಲ್ಲಿದ್ದು, ಇನ್ನು ಸಹಿಸಲಾಗದು ಎನ್ನುತ್ತಾರೆ 20 ರಷ್ಡು ಬಸ್ಸುಗಳ ಮಾಲೀಕ ರಾಯ್ಸನ್.




