ಕಾಸರಗೋಡು: ಜಿಲ್ಲೆಯ ಕೃಷಿ ವಲಯದ ವಿವಿಧ ಅಗತ್ಯಗಳಿಗಾಗಿ 2022ನೇ ವರ್ಷದ ಸೀಮೆ ಎಣ್ಣೆ ವಿತರಣೆಗಿರುವ ಪರ್ಮಿಟ್ ನವೀಕರಣ ದಿನಾಂಕವನ್ನು ಫೆ. 19ರ ವರೆಗೆ ಮುಂದೂಡಲಾಗಿದೆ. ಆಯಾ ಕೃಷಿಭವನಗಳಲ್ಲಿ ಅರ್ಜಿ ಸ್ವೀಕರಿಸಲಾಗುವುದು.
ಅರ್ಜಿ ಸಲ್ಲಿಸುವವರು 20ರೂ. ಕೋರ್ಟ್ ಫೀ ಸ್ಟೇಂಪ್ ಲಗತ್ತಿಸಿದ ಅರ್ಜಿಯನ್ನು ಹಳೇ ಪರ್ಮಿಟ್‍ನೊಂದಿಗೆ ಕೃಷಿಭವನಕ್ಕೆ ಸಲ್ಲಿಸಬೇಕಾಗಿದೆ. ಕೃಷಿಅಧಿಕಾರಿಗಳ ಶಿಫಾರಸಿನೊಂದಿಗೆ ಫೆ. 28ರಿಂದ ಸೀಮೆ ಎಣ್ಣೆ ಪರ್ಮಿಟ್ ಕೃಷಿಕರಿಗೆ ವಿತರಣೆಯಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 255138)ಸಂಪರ್ಕಿಸುವಂತೆ ಜಿಲ್ಲಾ ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.




