HEALTH TIPS

2014ರ ಬಳಿಕ 200 ಬೆಲೆಬಾಳುವ ವಿಗ್ರಹಗಳನ್ನು ಭಾರತಕ್ಕೆ ಮರಳಿ ತರಲಾಗಿದೆ: ಮೋದಿ

            ನವದೆಹಲಿ: 2014ರ ಬಳಿಕ 200 ಬೆಲೆಬಾಳುವ ವಿಗ್ರಹಗಳನ್ನು ವಿದೇಶದಿಂದ ಭಾರತಕ್ಕೆ ವಾಪಸ್ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

           'ಈ ತಿಂಗಳ ಆರಂಭದಲ್ಲಿ ಭಾರತವು ಇಟಲಿಯಿಂದ ತನ್ನ ಅಮೂಲ್ಯವಾದ ಪರಂಪರೆ ಹೊಂದಿರುವ ವಿಗ್ರಹವೊಂದನ್ನು ಮರಳಿ ತರುವಲ್ಲಿ ಯಶಸ್ವಿಯಾಗಿದೆ.

             ಈ ವಿಗ್ರಹವು ಒಂದು ಸಾವಿರ ವರ್ಷಗಳಷ್ಟು ಹಳೆಯದಾದ ಅವಲೋಕಿತೇಶ್ವರ ಪದ್ಮಪಾಣಿಯದ್ದಾಗಿದೆ. ಈ ವಿಗ್ರಹವನ್ನು ಕೆಲವು ವರ್ಷಗಳ ಹಿಂದೆ ಬಿಹಾರದ ಕುಂದಲ್‌ಪುರ ದೇಗುಲದಿಂದ ಕಳವು ಮಾಡಲಾಗಿತ್ತು. ಆದರೆ, ಹಲವು ಪ್ರಯತ್ನಗಳ ಬಳಿಕ ಭಾರತ ಇದೀಗ ಈ ವಿಗ್ರಹವನ್ನು ಮರಳಿ ಪಡೆದಿದೆ' ಎಂದು ಅವರು ತಮ್ಮ ಮಾಸಿಕ ರೇಡಿಯೊ ಭಾಷಣ 'ಮನ್ ಕಿ ಬಾತ್'ನ 86 ನೇ ಸಂಚಿಕೆಯಲ್ಲಿ ಹೇಳಿದರು.

             ಅದೇ ರೀತಿ ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ವೆಲ್ಲೂರಿನಲ್ಲಿ 600-700 ವರ್ಷಗಳಷ್ಟು ಹಳೆಯ ಹನುಮಂತನ ವಿಗ್ರಹವನ್ನು ಕೂಡ ಕಳವು ಮಾಡಲಾಗಿತ್ತು. ಈ ತಿಂಗಳ ಆರಂಭದಲ್ಲಿ ನಾವು ಅದನ್ನು ಆಸ್ಟ್ರೇಲಿಯಾದಿಂದ ಹಿಂಪಡೆದಿದ್ದೇವೆ. ನಮ್ಮ ತಂಡ ಅದನ್ನು ಸ್ವೀಕರಿಸಿದೆ' ಎಂದರು.

'ಪ್ರತಿಯೊಂದು ವಿಗ್ರಹಗಳ ಇತಿಹಾಸವು ಆಯಾ ಕಾಲದ ಪ್ರಭಾವವನ್ನು ಚಿತ್ರಿಸುತ್ತದೆ ಮತ್ತು ಇವು ಭಾರತೀಯ ಶಿಲ್ಪಕಲೆಯ ಅದ್ಭುತ ಕಲಾತ್ಮಕತೆಗೆ ಉದಾಹರಣೆಯಾಗಿವೆ. ನಮ್ಮ ನಂಬಿಕೆಯೂ ಅವುಗಳೊಂದಿಗೆ ಬೆಸೆದುಕೊಂಡಿದೆ' ಎಂದು ಮೋದಿ ಹೇಳಿದರು.

            'ಈ ಹಿಂದೆ ಹಲವು ವಿಗ್ರಹಗಳನ್ನು ಕಳವು ಮಾಡಿ ಮಾರಲಾಗಿದೆ. ಇಂತಹ ವಿಗ್ರಹಗಳನ್ನು ಭಾರತ ಮಾತೆಗೆ ಮರಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ವಿಗ್ರಹಗಳು ಭಾರತದ ಆತ್ಮದ ಭಾಗವಾಗಿವೆ. ಇವುಗಳು ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಮಹತ್ವವಾಗಿವೆ' ಎಂದು ತಿಳಿಸಿದರು.

           ಕಳೆದ ಕೆಲವು ದಿನಗಳ ಹಿಂದಷ್ಟೇ ಕಾಶಿಯಿಂದ ಮಾ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೂಡ ಕಳವು ಮಾಡಲಾಗಿತ್ತು. ಅದನ್ನೂ ವಾಪಸ್ ಪಡೆಯಲಾಗಿದೆ. ಇದು ಜಾಗತಿಕವಾಗಿ ಭಾರತದೆಡೆಗಿನ ದೃಷ್ಟಿಕೋನ ಬದಲಾಗುತ್ತಿರುವುದನ್ನು ಸೂಚಿಸುತ್ತದೆ. 2013ರವರೆಗೆ ಸುಮಾರು 13 ವಿಗ್ರಹಗಳನ್ನು ಭಾರತಕ್ಕೆ ಮರಳಿ ತರಲಾಗಿದೆ. ಆದರೆ ಕಳೆದ 7 ವರ್ಷಗಳಲ್ಲಿ 200ಕ್ಕೂ ಅಧಿಕ ಅತ್ಯಮೂಲ್ಯ ವಿಗ್ರಹಗಳನ್ನು ದೇಶಕ್ಕೆ ವಾಪಸ್ ತರಲಾಗಿದೆ. ಅಮೆರಿಕ, ಬ್ರಿಟನ್, ಹಾಲೆಂಡ್, ಫ್ರಾನ್ಸ್, ಕೆನಡಾ, ಜರ್ಮನಿ, ಸಿಂಗಪುರ ಸೇರಿದಂತೆ ಹಲವು ರಾಷ್ಟ್ರಗಳು ವಿಗ್ರಹಗಳೊಂದಿಗಿನ ನಮ್ಮ ಭಾವನೆಯನ್ನು ಅರ್ಥ ಮಾಡಿಕೊಂಡಿವೆ ಮತ್ತು ಅವುಗಳನ್ನು ಮರಳಿ ತರಲು ನೆರವಾಗಿವೆ' ಎಂದು ತಿಳಿಸಿದ್ದಾರೆ.

               ಸೆಪ್ಟೆಂಬರ್ 2021 ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದಾಗ, ಅಲ್ಲಿ ಬಹಳಷ್ಟು 'ಪ್ರಾಚೀನ' ವಿಗ್ರಹಗಳು ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಅನೇಕ ಕಲಾಕೃತಿಗಳನ್ನು ಕಂಡದ್ದಾಗಿ ತಿಳಿಸಿದ ಅವರು, ಅಮೂಲ್ಯ ಪರಂಪರೆಯನ್ನು ಹೊಂದಿರುವ ವಸ್ತುಗಳು ದೇಶಕ್ಕೆ ಹಿಂತಿರುಗಿದಾಗ ಸ್ವಾಭಾವಿಕವಾಗಿಯೇ ಅದು ನಮಗೆಲ್ಲರಿಗೂ ಬಹಳ ತೃಪ್ತಿಯ ವಿಚಾರವಾಗಿರುತ್ತದೆ' ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries