ಕಾಸರಗೋಡು: ಪರವನಡ್ಕ ಮಕ್ಕಳ ಮಂದಿರದಲ್ಲಿರುವ ಮಕ್ಕಳು ಐಎಎಸ್ ಮತ್ತು ಐಪಿಎಸ್‍ನಲ್ಲಿ ಉನ್ನತ ಸಾಧನೆ ಮಾಡಿದವರನ್ನು ನೋಡಲು ಮತ್ತು ಅವರು ನೀಡಿದ ಅರಿವಿನ ಉಪನ್ಯಾಸ ಕೇಳಲು ಉತ್ಸುಕರಾಗಿದ್ದರು. ಗುರಿ ಮುಟ್ಟುವ ಪ್ರಾಮಾಣಿಕ ಹಂಬಲ ಹಾಗೂ ಕಠಿಣ ಪರಿಶ್ರಮವಿದ್ದರೆ ಅದಕ್ಕೆ ಪೂರಕವಾಗಿ ನಿಲ್ಲುತ್ತದೆ ಎಂದು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಪರವನಡ್ಕ ಮಕ್ಕಳ ಮನೆಯಿಂದ ಜಿಲ್ಲೆಯಲ್ಲಿ "ಪ್ರಯಾಣ್ 2022" ಯೋಜನೆ ಆರಂಭಗೊಂಡಿದೆ.
ಜೀವನದಲ್ಲಿ ಶೈಕ್ಷಣಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ಸಾಧನೆ ಮಾಡಿದವರ ಮಾತುಗಳನ್ನು ಕೇಲಲು, ಸಾಧನಾ ಪಥದ ಮಾರ್ಗ ಕಂಡುಕೊಳ್ಳಲು ಅನಾಥ ಮಂದಿರದ ವಿದ್ಯಾರ್ಥಿಗಳೆಲ್ಲರೂ ಶೆಹೀನ್.ಸಿ ಐಪಿಎಸ್ ಅವರಲ್ಲಿ ಮಾಹಿತಿಯನ್ನು ಕೇಳಿಪಡೆದರು.ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಕೂಡ ಸುಮಾರು ಒಂದೂವರೆ ಗಂಟೆಗಳ ಕಾಲ ಉಪಸ್ಥಿತರಿದ್ದು ಮಕ್ಕಳ ಸಂದೇಹಗಳನ್ನು ನಿವಾರಿಸಿದರು.
ಜಿಲ್ಲೆಯಲ್ಲಿ ವಿಶೇಷ ಪರಿಗಣನೆಗೆ ಅರ್ಹರಾಗಿರುವ ಮಕ್ಕಳ ಜೀವನದ ಯಶಸ್ಸಿಗೆ ಮಾರ್ಗದರ್ಶನ ನೀಡಲು ಜಿಲ್ಲಾಡಳಿತವು ಪ್ರಾರಂಭಿಸಿರುವ ಯೋಜನೆಯ ಪ್ರಯಾಣ್ 2022 ನ್ನು ಜಿಲ್ಲಾಧಿಕಾರಿ ದಂಡಾರಿ ಸ್ವಾಗತ್ ರಣವೀರ್ ಚಂದ್ ಉದ್ಘಾಟಿಸಿದರು. 2020ರ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ತರಬೇತಿಗೆ ಆಯ್ಕೆಯಾಗಿರುವ ಬೆಂಗಳೂರಿನಲ್ಲಿ ತರಬೇತಿಪಡೆದ ಕಾಸರಗೋಡು ನೀಲೇಶ್ವರ ನಿವಾಸಿ ಸಿ ಶಾಹೀನ್ ಅವರು ಪರವನಡ್ಕ ಮಕ್ಕಳ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಗೃಹ ಮೇಲ್ವಿಚಾರಕ ಟಿ.ಕೆ.ಉಸ್ಮಾನ್ ಸ್ವಾಗತಿಸಿ, ಡಿಸಿಪಿಯು ಸಂರಕ್ಷಣಾಧಿಕಾರಿ ಎ.ಜಿ.ಫೈಸಲ್ ವಂದಿಸಿದರು.
ಪ್ರಯಾಣ್ 2022 ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳ ಭಾಗವಹಿಸುವಿಕೆಯೊಂದಿಗೆ ಮುಂಬರುವ ವಾರಗಳಲ್ಲಿ ನಡೆಯಲಿದೆ.




