ಕಾಸರಗೋಡು: 2015ರ ಫೆಬ್ರವರಿಯಲ್ಲಿ ಆರಂಭಗೊಂಡ ಬೈಂದೂರು ಪ್ಯಾಸೆಂಜರ್ ರೈಲು 56665/56666, ಕಾಸರಗೋಡು-ಮೂಕಾಂಬಿಕಾ ಪ್ಯಾಸೆಂಜರ್ 56665/56666 ನ್ನು ಮೇ 2017ರಿಂದ ಸ್ಥಗಿತಗೊಳಿಸಲಾಗಿದ್ದು, ಮರು ವೇಳಾಪಟ್ಟಿಯನ್ನು ಕೋರಿ ಮತ್ತೊಮ್ಮೆ ರೈಲ್ವೆ ಸಚಿವಾಲಯಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸಂಸದ ರಾಜಮೋಹನ ಉಣ್ಣಿತ್ತಾನ್ ತಿಳಿಸಿರುವರು. ಪರಿಷ್ಕøತ ವೇಳಾಪಟ್ಟಿಯೊಂದಿಗೆ ರೈಲ್ವೇ ಇಲಾಖೆ ಶೀಗ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಕೇರಳದಲ್ಲಿ, ವಿಶೇಷವಾಗಿ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಎನ್‍ಸಿಸಿ ಬೆಟಾಲಿಯನ್‍ಗಳನ್ನು ಮಂಜೂರು ಮಾಡಲು ಉದ್ದೇಶಿಸಿದೆಯೇ ಅಥವಾ 2014 ರಲ್ಲಿ ಕೇರಳ ಸರ್ಕಾರದಿಂದ ಈ ನಿಟ್ಟಿನಲ್ಲಿ ಯಾವುದೇ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ರಕ್ಷಣಾ ಸಚಿವಾಲಯದಿಂದ ಅನುಮೋದಿಸಲಾಗಿದೆಯೇ ಎಂಬ ಸಂಸದರ ಪ್ರಶ್ನೆಗೆ ಹೊಸ ಶಿಕ್ಷಣ ನೀತಿಯ ಭಾಗವಾಗಿ ರಾಜ್ಯಕ್ಕೆ ಹೆಚ್ಚುವರಿ ಕೆಡೆಟ್‍ಗಳನ್ನು ನಿಯೋಜಿಸುವ ಮೂಲಕ ಎನ್‍ಸಿಸಿಯ ನಾಲ್ಕು ಘಟಕಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಕೇಂದ್ರ ರಕ್ಷಣಾ ರಾಜ್ಯ ಸಚಿವರು ರಾಜಮೋಹನ್ ಉಣ್ಣಿತ್ತಾನ್ ಅವರಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಗಡಿ / ಕರಾವಳಿಗೆ ಎನ್ ಸಿ ಸಿ ವಿಸ್ತರಣೆ ಯೋಜನೆ ಇದೆ ಎಂಬ ಉತ್ತರವೂ ಲಭಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ 2021 ರ ಜನಗಣತಿ ಮತ್ತು ಸಂಬಂಧಿತ ಕ್ಷೇತ್ರ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಮತ್ತು 2020 ಮತ್ತು 2021 ರಲ್ಲಿ ಜನಗಣತಿ ಚಟುವಟಿಕೆಗಳಿಗಾಗಿ ಒಟ್ಟು 372 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ಮತ್ತು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‍ನಿಂದ 1736 ಹುದ್ದೆಗಳ ಭರ್ತಿಗೆ ವಿನಂತಿಗಳನ್ನು ಕಳುಹಿಸಲಾಗಿದೆ ಎಂದು ಸಂಸದರಿಗೆ ಲೋಕಸಭೆಯಲ್ಲಿ ಮಾಹಿತಿ ನೀಡಲಾಗಿದೆ.




