ಉಪ್ಪಳ: 30 ವರ್ಷಗಳಿಂದ ಕ್ಯಾಂಪ್ಕೋ ಸಂಸ್ಥೆಗೆ ಬೆಳೆದ ಅಡಿಕೆಯನ್ನು ನೀಡಿದ್ದೇನೆ. ಅದರ ಫಲವಾಗಿ ನನ್ನ ಚಿಕಿತ್ಸೆಗೆ ನೆರವನ್ನು ನೀಡಿದ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ ಎಂದು ಹೃದಯ ಶಸ್ತ್ರಚಿಕಿತ್ಸೆಗಾಗಿ ಕ್ಯಾಂಪ್ಕೋ ನೀಡಿದ 2 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಪಡೆದುಕೊಂಡು ಅಬ್ದುಲ್ ರಹಿಮಾನ್ ಬಾಯಾರು ಹೇಳಿದರು.
ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಕಾರ್ಯಕ್ರಮದಲ್ಲಿ ಕ್ಯಾಂಪ್ಕೊ ಬಾಯಾರು ಶಾಖೆಯ ನೇತೃತ್ವದಲ್ಲಿ ತನ್ನ ಮನೆಗೆ ಆಗಮಿಸಿದ ನಿಯೋಗದೊಂದಿಗೆ ಮಾತನಾಡುತ್ತಿದ್ದ ಅವರು ಕೃಷಿಕರಿಗೆ ಮುಂದಿನ ದಿನಗಳಲ್ಲಿ ಉತ್ತಮ ರೀತಿಯ ಸಹಕಾರವು ಸಂಸ್ಥೆಯಿಂದ ಲಭಿಸಲಿ ಎಂದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಚೆಕ್ ಹಸ್ತಾಂತರಿಸಿದರು. ನಿರ್ದೇಶಕರುಗಳಾದ ಬಾಲಕೃಷ್ಣ ರೈ, ಡಾ.ಜಯಪ್ರಕಾಶ್ ನಾರಾಯಣ, ಪ್ರಾಂತೀಯ ಪ್ರಬಂಧಕ ಗಿರೀಶ್ ಇ., ಶಾಖಾ ಪ್ರಬಂಧಕ ಕುಞಂಬು ಎ. ಪಾಲ್ಗೊಂಡಿದ್ದರು.




