HEALTH TIPS

ರಾಜ್ಯದಲ್ಲಿ ಕ್ಷೀಣಿಸುತ್ತಿರುವ ಕೊರೋನಾ: ಇಂದು 26,729 ಮಂದಿಗೆ ಸೋಂಕು ಪತ್ತೆ


          ತಿರುವನಂತಪುರ: ರಾಜ್ಯದಲ್ಲಿ ಇಂದು 26,729 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 3989, ತಿರುವನಂತಪುರ 3564, ತ್ರಿಶೂರ್ 2554, ಕೊಟ್ಟಾಯಂ 2529, ಕೊಲ್ಲಂ 2309, ಕೋಝಿಕ್ಕೋಡ್ 2071, ಮಲಪ್ಪುರಂ 1639, ಆಲಪ್ಪುಳ 1609, ಕಣ್ಣೂರು 1442, ಪತ್ತನಂತಿಟ್ಟು 1307, ಪಾಲಕ್ಕಾಡ್ 1215, ಇಡುಕ್ಕಿ 1213, ವಯನಾಡ್ 825, ಕಾಸರಗೋಡು 463 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ 88,098 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 5,01,814 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 4,92,364 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 9,450 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ.  ಒಟ್ಟು 927 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಪ್ರಸ್ತುತ, 3,29,348 ಕೋವಿಡ್ ಪ್ರಕರಣಗಳಲ್ಲಿ, ಕೇವಲ 3 ಶೇ. ಜನರು   ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
        ಕಳೆದ 24 ಗಂಟೆಗಳಲ್ಲಿ 22 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 115 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 378 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 58,255ಕ್ಕೆ ಏರಿಕೆಯಾಗಿದೆ.
          ಇಂದು,ಸೋಂಕು ಪತ್ತೆಯಾದವರಲ್ಲಿ 119 ಮಂದಿ ಜನರು ಹೊರ ರಾಜ್ಯದವರು.  ಸಂಪರ್ಕದ ಮೂಲಕ 25,337 ಮಂದಿ  ಜನರು ಸೋಂಕಿಗೆ ಒಳಗಾಗಿದ್ದಾರೆ.  1083 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 190 ಮಂದಿ  ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
       ಇಂದು ಒಟ್ಟು 49,261 ಮಂದಿ ಗುಣಮುಖರಾಗಿದ್ಜದಾರೆ.  ತಿರುವನಂತಪುರ 4871, ಕೊಲ್ಲಂ 6195, ಪತ್ತನಂತಿಟ್ಟ 2007, ಆಲಪ್ಪುಳ 2196, ಕೊಟ್ಟಾಯಂ 3206, ಇಡುಕ್ಕಿ 1985, ಎರ್ನಾಕುಲಂ 10,794, ತ್ರಿಶೂರ್ 3982, ಪಾಲಕ್ಕಾಡ್ 2729, ಮಲಪ್ಪುರಂ 2680, ಕೋಝಿಕ್ಕೋಡ್ 3856, ವಯನಾಡ್ 1594, ಕಣ್ಣೂರು 1976, ಕಾಸರಗೋಡು 1190 ಎಂಬಂತೆ ಗುಣಮುಖರಾಗಿದ್ದಾರೆ.
       ಇದರೊಂದಿಗೆ 3,29,348 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 58,83,023 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries