ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಶೇ 3ರಷ್ಟು ವಿಚ್ಛೇದನಗಳು ವಾಹನ ದಟ್ಟಣೆಯಿಂದಾಗಿ (ಟ್ರಾಫಿಕ್ ಜಾಮ್) ಸಂಭವಿಸಿವೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡಣವಿಸ್ ಅವರ ಪತ್ನಿ ಅಮೃತಾ ಫಡಣವಿಸ್ ಆರೋಪಿಸಿದ್ದಾರೆ.
0
samarasasudhi
ಫೆಬ್ರವರಿ 05, 2022
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಶೇ 3ರಷ್ಟು ವಿಚ್ಛೇದನಗಳು ವಾಹನ ದಟ್ಟಣೆಯಿಂದಾಗಿ (ಟ್ರಾಫಿಕ್ ಜಾಮ್) ಸಂಭವಿಸಿವೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡಣವಿಸ್ ಅವರ ಪತ್ನಿ ಅಮೃತಾ ಫಡಣವಿಸ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆ 'ಎಎನ್‌ಐ' ಟ್ವೀಟಿಸಿದೆ.
'ನಾನು ಇದನ್ನು ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ. ಒಮ್ಮೆ ಮನೆಯಿಂದ ಹೊರಗೆ ಹೋದರೆ ರಸ್ತೆಯಲ್ಲಿ ಗುಂಡಿಗಳು, ಟ್ರಾಫಿಕ್ ಸಮಸ್ಯೆಗಳನ್ನು ಮಾತ್ರ ನೋಡುತ್ತಿದ್ದೇವೆ. ಟ್ರಾಫಿಕ್‌ನಿಂದಾಗಿ ಜನರಿಗೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮುಂಬೈನಲ್ಲಿ ಶೇ 3ರಷ್ಟು ವಿಚ್ಛೇದನಗಳು ಸಂಭವಿಸುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ತನ್ನ ತಪ್ಪುಗಳ ಬಗ್ಗೆ ಗಮನ ಹರಿಸುವಂತೆ ನಾನು ಸಲಹೆ ನೀಡುತ್ತೇನೆ' ಎಂದು ಹೇಳಿದ್ದಾರೆ.
ಸರ್ಕಾರವು ಏಕಸ್ವಾಮ್ಯವಾಗಿ ವರ್ತಿಸುತ್ತಿದೆ. ಕೇವಲ ವಸೂಲಿ ಸರ್ಕಾರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ಅಮೃತಾ ಫಡಣವಿಸ್ ಆರೋಪವು ನಾಯಕರಲ್ಲಿ ಅಚ್ಚರಿ ಮೂಡಿಸಿದೆ. ವಿಚ್ಛೇದನಕ್ಕೆ ಹಲವು ಕಾರಣಗಳಿರಬಹುದು. ಆದರೆ ಇಂತಹ ಕಾರಣವನ್ನು ಮೊದಲ ಬಾರಿಗೆ ಕೇಳುತ್ತಿದ್ದೇನೆ ಎಂದು ಪಡ್ನೆಕರ್ ಹೇಳಿದ್ದಾರೆ.