ಶ್ರೀನಗರ: ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕಾಶ್ಮೀರದ ಪತ್ರಕರ್ತರೊಬ್ಬರು ಪೊಲೀಸರು ಬಂಧಿಸಿದ್ದಾರೆ.
0
samarasasudhi
ಫೆಬ್ರವರಿ 05, 2022
ಶ್ರೀನಗರ: ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕಾಶ್ಮೀರದ ಪತ್ರಕರ್ತರೊಬ್ಬರು ಪೊಲೀಸರು ಬಂಧಿಸಿದ್ದಾರೆ.
'ಸ್ಥಳೀಯ 'ಕಾಶ್ಮೀರ ವಾಲಾ' ನಿಯತಕಾಲಿಕೆಯ ಸಂಪಾದಕ ಫಹಾದ್ ಶಾ ಅವರನ್ನು ಶುಕ್ರವಾರ ಭಯೋತ್ಪಾದನೆಯನ್ನು ವೈಭವೀಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
'ಭಯೋತ್ಪಾದನೆಯ ವೈಭವೀಕರಣ, ಸುಳ್ಳು ಸುದ್ದಿ ಹಂಚಿಕೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಸನ್ನಿವೇಶ ಸೃಷ್ಟಿಸಿದ ಆರೋಪದ ಮೇಲೆ ಪತ್ರಕರ್ತ ಫಹಾದ್ ಶಾ ಅವರನ್ನು ಬಂಧಿಸಲಾಗಿದೆ' ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದರು.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ದೇಶ ವಿರೋಧಿ ಫೋಟೊ, ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಶ್ರೀನಗರ, ಶೋಪಿಯಾನ್ ಹಾಗೂ ಪುಲ್ವಾಮ ಜಿಲ್ಲೆಗಳ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.