HEALTH TIPS

ಗ್ರಾಹಕ ವಸ್ತುಗಳು ಶೇ.5 ತುಟ್ಟಿ?: ಕಚ್ಚಾವಸ್ತು, ಉತ್ಪಾದನಾ ವೆಚ್ಚ ಹೆಚ್ಚಳ; ಬೆಲೆ ಏರಿಕೆಗೆ ಕಂಪನಿಗಳ ಚಿಂತನೆ

            ನವದೆಹಲಿ: ಬಿಸ್ಕತ್, ಸೌಂದರ್ಯವರ್ಧಕ ಉತ್ಪನ್ನ ಮತ್ತು ಗೃಹೋಪಯೋಗಿ ಉಪಕರಣಗಳ ಬೆಲೆ ಪ್ರಸಕ್ತ ತ್ರೖೆಮಾಸಿಕದಲ್ಲಿ ಇನ್ನೊಂದು ಬಾರಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಉತ್ಪಾದನಾ ವೆಚ್ಚದಲ್ಲಿ ಭಾರಿ ಹೆಚ್ಚಳ ಹಾಗೂ ಲಾಭಾಂಶದಲ್ಲಿ ಕೊರತೆ ಎದುರಿಸುತ್ತಿರುವುದರಿಂದ ದರ ಏರಿಸಲು ಚಿಂತನೆ ನಡೆಸಲಾಗುತ್ತಿದೆ.

             'ಬೆಲೆಗಳನ್ನು ಇಷ್ಟರಲ್ಲೇ ಏರಿಸಬೇಕಿತ್ತು. ಆದರೆ ಹಬ್ಬದ ಋತುವಾದ್ದರಿಂದ ಏರಿಸಿರಲಿಲ್ಲ' ಎಂದು ಗ್ರಾಹಕ ಇಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಎರಿಕ್ ಬೃಗಾಂಜಾ ಹೇಳಿದ್ದಾರೆ.

             ಈ ತ್ರೖೆಮಾಸಿಕದಲ್ಲಿ ಶೇ.5 ಬೆಲೆಯೇರಿಕೆ ಮಾಡುವ ಸಾಧ್ಯತೆಯಿದೆ ಎಂದು ಅವರು ಸುಳಿವು ನೀಡಿದ್ದಾರೆ. ಕೆಲವು ಕಂಪನಿಗಳು ಈಗಾಗಲೇ ಬೆಲೆಯೇರಿಸಿದ್ದು ಇನ್ನು ಕೆಲವು ಸಂಸ್ಥೆಗಳು ಆ ಪ್ರಕ್ರಿಯೆಯಲ್ಲಿವೆ. ಕಳೆದ 18 ತಿಂಗಳಿಂದ ಸಾಮಗ್ರಿಗಳ ಬೆಲೆಗಳು ಯದ್ವಾತದ್ವಾ ಏರಿಕೆಯಾಗಿವೆ ಎಂದು ಫ್ಯಾನ್, ಕೂಲರ್ ಮತ್ತು ಕಿಚನ್ ಉತ್ಪನ್ನಗಳ ತಯಾರಕ ಸಂಸ್ಥೆಯಾದ ಓರಿಯೆಂಟ್ ಇಲೆಕ್ಟ್ರಾನಿಕ್ಸ್ ಹೇಳಿದೆ. ಪ್ಲಾಸ್ಟಿಕ್, ಉಕ್ಕು, ತಾಮ್ರ ಮೊದಲಾದವುಗಳ ಬೆಲೆ ತೀವ್ರ ಏರಿಕೆ ಕಂಡಿವೆ ಎಂದು ಓರಿಯೆಂಟ್​ನ ಬಿಸಿನೆಸ್ ಹೆಡ್ ಸಲೀಲ್ ಕಪೂರ್ ಹೇಳಿದ್ದು, ಕಂಪನಿ ವಿವಿಧ ಉತ್ಪನ್ನಗಳ ಬೆಲೆಗಳನ್ನು ಶೇಕಡ 4ರಿಂದ 7 ಏರಿಸುವ ಸಾಧ್ಯತೆಯಿದೆ ಎಂದಿದ್ದಾರೆ. ಸಾಗಾಟ ವೆಚ್ಚ ಬಹಳಷ್ಟು ತುಟ್ಟಿಯಾಗಿದೆ. ಅದನ್ನು ಗ್ರಾಹಕರ ಮೇಲೆ ಹೊರಿಸುವುದಲ್ಲದೆ ಬೇರೆ ದಾರಿಯೇ ಇಲ್ಲ. ಸ್ವಲ್ಪ ಸಮಯದ ಹಿಂದೆ ಬೆಲೆಯೇರಿಕೆ ಮಾಡಿದ್ದು ಪ್ರಸಕ್ತ ತ್ರೖೆಮಾಸಿಕದಲ್ಲಿ ಇನ್ನೊಮ್ಮೆ ಮಾಡುತ್ತೇವೆ ಎಂದು ಕಪೂರ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries