HEALTH TIPS

9 ವರ್ಷಗಳ ಬಳಿಕ IPL ಆಟಗಾರರ ಹರಾಜು ಪಟ್ಟಿಗೆ ಮರಳಿದ ಶ್ರೀಶಾಂತ್, ಕೇರಳ ವೇಗಿಯ ಪ್ರತಿಕ್ರಿಯೆ ಹೀಗಿದೆ

       ಒಂದಲ್ಲ, ಎರಡಲ್ಲ ಬರೋಬ್ಬರಿ 9 ವರ್ಷಗಳವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಿಂದ ಹೊರ ಉಳಿದ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಆಗಿದ್ದ ಶ್ರೀಶಾಂತ್ (Sreenath) ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಐಪಿಎಲ್ 2022ರ ಸಲುವಾಗಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಹರಾಜು ಪಟ್ಟಿ(Auction List) ಯೊಂದನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಅದರಲ್ಲಿ ಕೇರಳ ಮೂಲದ ವೇಗದ ಬೌಲರ್   ಹೆಸರನ್ನು ಸಹ ಸೇರಿಸಿಕೊಳ್ಳಲಾಗಿದೆ.

        ಇದೇ ತಿಂಗಳು 12 ಮತ್ತು 13ನೇ ತಾರೀಖಿನಂದು ಬೆಂಗಳೂರಿನಲ್ಲಿ 2022ರ ಐಪಿಎಲ್ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ದೃಢಪಡಿಸಿದೆ. ಎರಡು ದಿನಗಳ ಬೃಹತ್ ಹರಾಜಿನಲ್ಲಿ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರನ್ನು ಸಹ ಸುಮಾರು 590 ಕ್ರಿಕೆಟಿಗರೊಂದಿಗೆ ಸೇರಿಕೊಂಡಿದ್ದಾರೆ. ಹಿರಿಯ ಬಲಗೈ ವೇಗಿ ಅಂತಿಮ ಹರಾಜು ಪಟ್ಟಿಯನ್ನು ನೋಡಿದ ತಕ್ಷಣವೇ ತಮ್ಮ ಹಿತೈಷಿಗಳಿಗೆ ಹೃತ್ಪೂರ್ವಕ ಸಂದೇಶವನ್ನು ತಮ್ಮ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

        ಶ್ರೀಶಾಂತ್ ಅವರು ಈ ಆಟಗಾರರ ಹರಾಜಿಗೆ 50 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ನೋಂದಾಯಿಸಲ್ಪಟ್ಟಿದ್ದಾರೆ. ಅವರು 2021ರ ಐಪಿಎಲ್ ಹರಾಜಿಗೆ ತಮ್ಮನ್ನು ನೋಂದಾಯಿಸಿಕೊಂಡಿದ್ದರು, ಆದರೆ ಅಂತಿಮ ಹರಾಜು ಪಟ್ಟಿಯಲ್ಲಿ ಅವರನ್ನು ಸೇರಿಸಲಾಗಿರಲಿಲ್ಲ. 38 ವರ್ಷದ ವೇಗದ ಬೌಲರ್ ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ "ನಿಮ್ಮೆಲ್ಲರಿಗೂ ನನ್ನ ಪ್ರೀತಿಯನ್ನು ತಿಳಿಸಲು ಇಷ್ಟಪಡುವೆ, ನಿಮ್ಮೆಲ್ಲರಿಗೂ ಸಾಕಷ್ಟು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಸದಾ ನಾನು ನಿಮಗೆ ಕೃತಜ್ಞನಾಗಿರುತ್ತೇನೆ. ಅಂತಿಮ ಹರಾಜಿನಲ್ಲೂ ಸಹ ನನಗಾಗಿ ನೀವು ದೇವರಲ್ಲಿ ಪ್ರಾರ್ಥಿಸಿ" ಓಂ ನಮಃ ಶಿವಾಯ" ಎಂದು ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದಾರೆ. ಇವರ ಈ ಟ್ವೀಟ್ ಅನ್ನು 20,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

                  ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿ ಆರೋಪ

           ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಿಂದಾಗಿ ಏಳು ವರ್ಷಗಳ ಅಮಾನತು ಶಿಕ್ಷೆಯಿಂದ ಹಿಂತಿರುಗಿದ ಅವರು, ಸಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ರಾಜ್ಯ ತಂಡದ ಪರ ಆಡಿದ್ದಾರೆ. ಶ್ರೀಶಾಂತ್ ಅವರ ಮೇಲೆ 2013ರಲ್ಲಿ ಇನ್ನಿಬ್ಬರು ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡದ ಆಟಗಾರರಾದ ಅಂಕೀತ್ ಚವ್ಹಾಣ್ ಮತ್ತು ಅಜಿತ್ ಚಾಡಿಲಾ ಅವರೊಂದಿಗೆ ಸ್ಪಾಟ್ ಫಿಕ್ಸಿಂಗ್ ಆರೋಪ ಮಾಡಲಾಗಿತ್ತು.

           ಶ್ರೀಶಾಂತ್ ಅವರು ಎರಡು ಬಾರಿ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದರು ಎಂದು ಹೇಳಬಹುದು. ಇವರು 2007ರಲ್ಲಿ ನಡೆದ ಟಿ20 ವಿಶ್ವಕಪ್ ಮತ್ತು 2011ರಲ್ಲಿ ನಡೆದಂತಹ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ವಿಜೇತ ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದರು.
          ಈ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್, ಶಿಖರ್ ಧವನ್, ಆರ್. ಅಶ್ವಿ ನ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಮುಂತಾದ ದೊಡ್ಡ ದೊಡ್ಡ ಆಟಗಾರರು ಇದ್ದಾರೆ. ಐಪಿಎಲ್ 2022ರಲ್ಲಿ ಎರಡು ಹೊಸ ಫ್ರಾಂಚೈಸಿಗಳು ಸಹ ಕಾಣಿಸಿಕೊಳ್ಳಲಿವೆ. ಅವುಗಳು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಅಹಮದಾಬಾದ್ ತಂಡಗಳಾಗಿದೆ.

       ಶ್ರೀಶಾಂತ್ ಅವರು ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿರುವುದಲ್ಲದೇ, ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 1 ತಂಡವಾದ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದರು. ಈ ವೇಗದ ಬೌಲರ್ 27 ಟೆಸ್ಟ್‌ಗಳಲ್ಲಿ 87 ವಿಕೆಟ್‌ಗಳನ್ನು ಪಡೆದಿದ್ದು, ಇದರಲ್ಲಿ ಮೂರು ಬಾರಿ ಒಂದೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries