HEALTH TIPS

ಪ್ರೊ ಕಬಡ್ಡಿ: ಪಾಟ್ನಾ ಪೈರಟ್ಸ್ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ದಬಾಂಗ್ ದೆಹಲಿ

              ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಪ್ರೊ ಕಬಡ್ಡಿ ಸೀಸನ್ 8 ರ ಚಾಂಪಿಯನ್ ಆಗಿ ದಬಾಂಗ್ ದೆಹಲಿ ಕೆಸಿ ತಂಡ ಹೊರಹೊಮ್ಮಿದೆ‌. 

            ಫೈನಲ್ ಪಂದ್ಯದಲ್ಲಿ ಎದುರಾಳಿಗಳಾಗಿದ್ದ ಪಟ್ನಾ ಪೈರಟ್ಸ್ ಮತ್ತು ದಬಾಂಗ್ ದೆಹಲಿ ಕೆ.ಸಿ ತಂಡಗಳಲ್ಲಿ ದಬಾಂಗ್ ದೆಹಲಿ ಕೆಸಿ ಪಡೆ ಮೊದಲ ಬಾರಿಗೆ ಗೆಲುವಿನ ನಗೆ ಬೀರಿ ಕಪ್ ಗೆ ಮುತ್ತಿಕ್ಕಿತು.

             ರೋಚಕ ಪಂದ್ಯದಲ್ಲಿ ಕೇವಲ 1 ಅಂಕದ ಅಂತರದಲ್ಲಿ ಪಾಟ್ನಾ ಪೈರಟಸ್ ತಂಡಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ಸೀಸನ್ 8ರ ಗೆಲುವನ್ನ ತನ್ನ ಖಾತೆಗೆ ಹಾಕಿಕೊಳ್ತು. ಕಳೆದ ಬಾರಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಫೈನಲ್ ನಲ್ಲಿ ಸೋತು ರನ್ನರ್ ಅಪ್ ಆಗಿದ್ದ ದಬಾಂಗ್ ದೆಹಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. ಈ ಮೂಲಕ 2 ತಿಂಗಳಿಗೂ ಹೆಚ್ಚು ಕಾಲ 137 ಪಂದ್ಯಗಳಲ್ಲಿ ಸೆಣಸಾಡಿದ 12 ತಂಡಗಳ ನಡುವಿನ ಕಾದಾಟಕ್ಕೆ ತೆರೆಬಿದ್ದಿದೆ.

                ದಬಾಂಗ್ ದೆಹಲಿ ಕೆ ಸಿ ತಂಡದ ರೇಡರ್ ನವೀನ್ ಕುಮಾರ್ ಮತ್ತು ವಿಜಯ್ ಉತ್ತಮ ಪ್ರದರ್ಶನ ನೀಡಿದ್ರು. ಆರಂಭದಿಂದ್ಲೂ ಗೆಲುವಿಗಾಗಿ ಎರಡೂ ತಂಡಗಳು ಪ್ರಬಲವಾಗಿ ಕಾದಾಡಿ ಹಿಡಿತ ಸಾಧಿಸಿದ್ವು. ಕಡಿಮೆ ಅಂಕಗಳ ಅಂತರದಿಂದ ಪಟ್ನಾ ಪೈರಟ್ಸ್ ಪಂದ್ಯ ಆರಂಭವಾದಾಗಿನಿಂದ ಮುನ್ನಡೆ ಕಾಯ್ದುಕೊಂಡಿತ್ತು.

          ಆದರೆ ಕೊನೆಯ 6 ನಿಮಿಷಗಳ ಆಟವಿರುವಾಗ ದಬಾಂಗ್ ದೆಹಲಿ ಮುನ್ನಡೆ ಕಾಯ್ದುಕೊಳ್ತು. ಅಂತಿಮವಾಗಿ ದೆಹಲಿ ಟೀಂ ಪಟ್ನಾ ಪೈರಟ್ಸ್ ವಿರುದ್ಧ 37-36 ಅಂಕಗಳಿಂದ ಸೀಸನ್ 8ರ ಗೆಲುವಿನ ಪಟ್ಟಕ್ಕೇರಿತು. 3 ಬಾರಿ ಚಾಂಪಿಯನ್ ಆಗಿದ್ದ ಪಟ್ನಾ ಪೈರಟ್ಸ್ ಈ ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries