ಕೊಚ್ಚಿ: ಗಣರಾಜ್ಯೋತ್ಸವದಂದು ತಮ್ಮ ಮನೆಗಳಲ್ಲೇ ಧ್ವಜಾರೋಹಣಗೈದು ನಮನ ಸಲ್ಲಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಭಾರತೀಯ ನೌಕಾಪಡೆ ಗೌರವಿಸಿದೆ. ತ್ರಿಶೂರ್ ಬಳಿಯ ಸಿಎನ್‍ಎನ್ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಕೊಚ್ಚಿ ನೌಕಾನೆಲೆಗೆ ಕರೆಸಿ ದಕ್ಷಿಣ ನೌಕಾದಳದ ವತಿಯಿಂದ ಸನ್ಮಾನಿಸಲಾಯಿತು.
ಮಕ್ಕಳ ಗಣರಾಜ್ಯೋತ್ಸವದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ್ದರು. ಕೊರೋನಾ ವ್ಯಾಪಕತೆ ಹಿನ್ನೆಲೆಯಲ್ಲಿ ಶಾಲೆಗಳು ಇದ್ದಿರಲಿಲ್ಲ. ರಾಷ್ಟ್ರಧ್ವಜಾರೋಹಣವನ್ನು ಮಕ್ಕಳ ಅಜ್ಜಿ ನೆರವೇರಿಸಿದ್ದರು. ಭಾರತ್ ಮಾತಾ ಕಿ ಜೈ ಎಂದು ಎಲ್ಲರೂ ಒಟ್ಟಿಗೆ ಕರೆದಿರುವುದನ್ನು ವೀಡಿಯೊ ತೋರಿಸುತ್ತದೆ. ವೈರಲ್ ವಿಡಿಯೋದಲ್ಲಿ ಮಕ್ಕಳ ಶಕ್ತಿ ಮತ್ತು ದೇಶಭಕ್ತಿಯನ್ನು ಗಮನಿಸಿದ ನಂತರ ನೌಕಾಪಡೆ ನೇರವಾಗಿ ನೌಕಾನೆಲೆಗೆ ಕರೆಸಿ ಗೌರವಿಸಲು ನಿರ್ಧರಿಸಿತು.
ತಂಡವು ಮೊದಲು ಭಾರತೀಯ ನೌಕೆ ಮಗರ್‍ಗೆ ಭೇಟಿ ನೀಡಿತು. ಅವರು ಭಾರತೀಯ ನೌಕಾಪಡೆಯ ಕಡಲ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿದರು. ಪೋರ್ಟ್ ಕೊಚ್ಚಿಯಲ್ಲಿರುವ ನೌಕಾಪಡೆಯ ಗುನ್ನರಿ ತರಬೇತಿ ಸಂಸ್ಥೆ ಐಎನ್‍ಎಸ್ ದ್ರೋಣಾಚಾರ್ಯಗೆ ಭೇಟಿ ನೀಡಿದರು. ಕಮಾಂಡಿಂಗ್ ಅಧಿಕಾರಿಗಳು, ಐಎನ್‍ಎಸ್ ಮಗರ್ ಐಎನ್‍ಎಸ್ ದ್ರೋಣಾಚಾರ್ಯ ಅಧಿಕಾರಿಗಳು ಮತ್ತು ಮಕ್ಕಳ ಕುಟುಂಬಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನೌಕಾಪಡೆಯು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಡುಗೊರೆಗಳನ್ನು ನೀಡಿತು. ಧ್ವಜಾರೋಹಣ ಮಾಡಿದ ಅಜ್ಜಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಸಂತಸ ವ್ಯಕ್ತಪಡಿಸಿದ ಮಗುವಿಗೆ ಉಡುಗೊರೆಯನ್ನೂ ನೀಡಿದರು. ನೇವಲ್ ವೈವ್ಸ್ ಫೆಡರೇಶನ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ನೌಕಾದಳದ ಪ್ರತಿನಿಧಿಗಳೊಂದಿಗೆ ಭೋಜನ ಸವಿದು ಹಿಂತಿರುಗಿದರು.




