ನವದೆಹಲಿ: ಸಿಬಿಎಸ್ಇ 10, 12 ನೇ ತರಗತಿಗಳ ಎರಡನೇ ಅವಧಿ (second-term) ಬೋರ್ಡ್ ಪರೀಕ್ಷೆಗಳು ಏ.26 ರಿಂದ ಆಫ್ ಲೈನ್ ಮೋಡ್ ನಲ್ಲಿ ಪ್ರಾರಂಭವಾಗಲಿವೆ.
ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಸಂಬಂಧಪಟ್ಟ ಹಲವರೊಂದಿಗೆ ಚರ್ಚೆ ನಡೆಸಿದ ಬಳಿಕ ಸಿಬಿಎಸ್ಇ ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಡು ಎರಡನೇ ಅವಧಿಯ ಬೋರ್ಡ್ ಪರೀಕ್ಷೆಯನ್ನು ಆಫ್ ಲೈನ್ ಮೋಡ್ ನಲ್ಲಿಯೇ ನಡೆಸಲು ತೀರ್ಮಾನಿಸಿದೆ ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರದ್ವಾಜ್ ತಿಳಿಸಿದ್ದಾರೆ.
ಥಿಯರಿ ಪರೀಕ್ಷೆಗಳು 2022 ರ ಏಪ್ರಿಲ್ 26 ರಿಂದ ಪ್ರಾರಂಭವಾಗಲಿದ್ದು, 10-12 ನೇ ತರಗತಿಗಳ ಡೇಟ್ ಶೀಟ್ ನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.




