HEALTH TIPS

ಕೊರೋನಾ ಹೆಸರಲ್ಲಿ ಇನ್ನು ಚಿತ್ರಮಂದಿರಗಳನ್ನು ಮುಚ್ಚುವುದಿಲ್ಲ: ಸಚಿವ ಸಾಜಿ ಚೆರಿಯನ್

              ತಿರುವನಂತಪುರ: ಇನ್ನು ಮುಂದೆ ಕೊರೊನಾ ಹೆಸರಿನಲ್ಲಿ ಚಿತ್ರಮಂದಿರಗಳನ್ನು ಮುಚ್ಚುವುದಿಲ್ಲ ಎಂದು ಸಂಸ್ಕøತಿ ಸಚಿವ ಸಾಜಿ ಚೆರಿಯನ್ ಹೇಳಿದ್ದಾರೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಮುನ್ನ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿವೆ ಎಂದು ಆಶಿಸಿದರು.

                     ತಿರುವನಂತಪುರದಲ್ಲಿ 26ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಸಚಿವರು. ಶಾಸಕ ವಿ.ಕೆ.ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್, ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬೀನಾಪೋಲ್ ಉಪಸ್ಥಿತರಿದ್ದರು.

                ಮುಚ್ಚಿದ ಎಸಿ ಹಾಲ್‍ನಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಕುಳಿತುಕೊಳ್ಳುವುದರಿಂದ ರೋಗ ಹರಡುವಿಕೆ ಹೆಚ್ಚಾಗಬಹುದು ಎಂದು ಸರ್ಕಾರ ಥಿಯೇಟರ್‍ಗಳ ಮೇಲೆ ನಿಬರ್ಂಧಗಳನ್ನು ವಿಧಿಸಿದೆ. ಆದರೆ ಮಾಲ್ ಸೇರಿದಂತೆ ಇತರೆಡೆಗಳಲ್ಲಿ ರಿಯಾಯಿತಿ ನೀಡಿದ ನಂತರ ಚಿತ್ರಮಂದಿರಗಳನ್ನು ಮುಚ್ಚುವುದು ತಾರತಮ್ಯ ಎನ್ನುತ್ತಾರೆ ಥಿಯೇಟರ್ ಮಾಲೀಕರು.

             ಕೊರೋನಾ ನಿಯಂತ್ರಣದ ಭಾಗವಾಗಿ ಥಿಯೇಟರ್‍ಗಳ ಮೇಲೆ ನಿರ್ಬಂಧಗಳನ್ನು ಹೇರುವ ಸರ್ಕಾರದ ನಿರ್ಧಾರದ ವಿರುದ್ಧ ಫೆಫ್ಕಾ ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಥಿಯೇಟರ್‍ಗಳನ್ನು ಮುಚ್ಚುವ ನಿರ್ಧಾರದ  ಕುರಿತು ಯಾವುದೇ ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಫೆಫ್ಕಾ ಒತ್ತಾಯಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries