HEALTH TIPS

ಮೀಡಿಯಾ ಒನ್ ಕಾಶ್ಮೀರ ಸಮಸ್ಯೆಯಲ್ಲಿ ಪಾಕಿಸ್ತಾನದ ಮುಖವಾಣಿಯಾಗಿ ಮಾರ್ಪಟ್ಟಿದೆ, ಭಾರತೀಯ ಸೈನಿಕರನ್ನು ಕೋಮುವಾದಿಗೊಳಿಸಲು ಪ್ರಯತ್ನಿಸುತ್ತಿದೆ; ಚಾನೆಲ್ ವಿರುದ್ದ ಕೈಗೊಂಡ ಕ್ರಮ ನ್ಯಾಯಯುತ: ಪತ್ರಕರ್ತ ಮ್ಯಾಥ್ಯೂಸ್ ಸ್ಯಾಮ್ಯುಯೆಲ್

                                         

                    ತಿರುವನಂತಪುರ: ಜಮಾತೆ ಇಸ್ಲಾಮಿ ಸಂಘಟನೆಯ ಮೀಡಿಯಾ ಒನ್ ಚಾನೆಲ್ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹ ಎಂದು ಹಿರಿಯ ಪತ್ರಕರ್ತ ಮ್ಯಾಥ್ಯೂ ಸ್ಯಾಮ್ಯುಯೆಲ್ ಹೇಳಿದ್ದಾರೆ. ತೆಹಲ್ಕಾ ಸೇರಿದಂತೆ ವಿವಿಧ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಮ್ಯಾಥ್ಯೂಸ್ ಸ್ಯಾಮ್ಯುಯೆಲ್ ಹಲವಾರು ವಿವಾದಾತ್ಮಕ ಸುದ್ದಿಗಳನ್ನು ಪ್ರಕಟಿಸಿದವರು. 

                ಚಾನೆಲ್‍ನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಲವು ಬಾರಿ ನೋಟಿಸ್‍ಗಳನ್ನು ಕಳುಹಿಸಿದೆ. ಆದರೆ ವಾಹಿನಿಯವರು ಎಲ್ಲವನ್ನೂ ಗೌಪ್ಯವಾಗಿಟ್ಟಿದ್ದರು. ವಾಹಿನಿಯ ವಿರುದ್ಧ ಕ್ರಮ ತಕ್ಷಣದ ತೀರ್ಮಾನವೇನಲ್ಲ. ಅವರ ಪ್ರಚರಣ ವಿಷಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಯಿತು. ಆದರೆ ಚಾನೆಲ್‍ನಲ್ಲಿ ಕೆಲಸ ಮಾಡುವವರು ಇದ್ಯಾವುದನ್ನೂ ನೋಡದಂತೆ ನಟಿಸಿದ್ದಾರೆ. ವಾಹಿನಿಯು ಮಾಧ್ಯಮ ಸಂಸ್ಥೆಗಳ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಉಲ್ಲಂಘಿಸಿದೆ.

             ಕಾಶ್ಮೀರದಲ್ಲಿ ಹಲವಾರು ಅಮಾಯಕರು ಭಯೋತ್ಪಾದಕರ ಗುಂಡಿಗೆ ಬಲಿಯಾದಾಗ ಅವರು ಮೌನವಾಗಿದ್ದರು. ಆದರೆ ಸೇನೆಯು ಭಯೋತ್ಪಾದಕರನ್ನು ಮತ್ತು ಅವರ ಬೆಂಬಲಿಗರನ್ನು ಕೊಂದಾಗ, ದೇಶದ ವಿರುದ್ಧ ಸುದ್ದಿಯಾಯಿತು. ಅಮಾಯಕ ಮುಸ್ಲಿಮರನ್ನು ಭಾರತೀಯ ಸೇನೆ ಗುಂಡಿಕ್ಕಿ ಕೊಂದಿದೆ ಎಂದು ಚಾನೆಲ್ ವರದಿ ಮಾಡಿದೆ. ಈ ವಿಚಾರದಲ್ಲಿ ಮೀಡಿಯಾ ಒನ್ ಶುದ್ಧ ಮೂರ್ಖತನ ತೋರಿದೆ. ಭಾರತದ ಮಾಧ್ಯಮಗಳು ಕಾಶ್ಮೀರದ ಬಡ ಜನರನ್ನು ಕೊಲ್ಲುತ್ತಿವೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನವು ಮೀಡಿಯಾ ಒನ್ ನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ಅನುಕೂಲಕ್ಕಾಗಿ ಬಳಸಿಕೊಂಡಿದೆ. ತಿಳಿದೋ ತಿಳಿಯದೆಯೋ ಭಾರತದ ವಿರುದ್ಧ ನಡೆದುಕೊಂಡರು.

                  ಅವರು ಭಾರತೀಯ ಸೇನೆಯಲ್ಲೂ ಕೋಮುವಾದ ಮಾಡಿದರು. ಭಾರತೀಯ ಸೇನೆ ವಿಶ್ವದಲ್ಲೇ ಅತ್ಯಂತ ವೃತ್ತಿಪರವಾಗಿದೆ. ಆ ಸೇನೆಯೇ ಕೋಮುವಾದಿಗಳಾಗಿ ಬದಲಾಯಿಸಿ ತೋರಿಸಲಾಯಿತು.  ಅವರು ಎಲ್ಲಾ ವಿಷಯಗಳನ್ನು ಧರ್ಮ ಸಂಬಂಧಿಯಾಗಿ ತೆಗೆದುಕೊಂಡರು. ಜಮಾತೆ ಇಸ್ಲಾಮಿ ವಾಹಿನಿ ಎಂಬ ಕಾರಣಕ್ಕೆ ಅದರ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ. ಅವರ ರಾಜಕೀಯ ಕೇಂದ್ರ ಸರ್ಕಾರಕ್ಕೆ ಸಮಸ್ಯೆಯಲ್ಲ. ಇದು ಹಣಕಾಸಿನ ವ್ಯವಹಾರವಾಗಿದ್ದರೆ, ಬೇರೇನಾದರೂ ಮಾಡಬಹುದಿತ್ತು. ಭಾರತದಲ್ಲಿದ್ದು ದೇಶವನ್ನು ನಾಶ ಮಾಡಲು ಯತ್ನಿಸಿದರು. ಈ ಚಾನಲ್ ಮತ್ತೆ ಪ್ರಸರಣ ಆರಂಭಿಸುವುದಾದರೆ ಅವರು ತಮ್ಮ ಸ್ವರೂಪವನ್ನು ಬದಲಾಯಿಸಬೇಕಾಗುತ್ತದೆ. ಅವರಿಗೆ ಪತ್ರಿಕೋದ್ಯಮ ಎಂದರೇನು ಎಂಬುದೇ ಗೊತ್ತಿಲ್ಲ ಎಂದು ಮ್ಯಾಥ್ಯೂ ಸ್ಯಾಮ್ಯುಯೆಲ್ ಸ್ಪಷ್ಟಪಡಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries