ಕಾಸರಗೋಡು: ಜಿಲ್ಲೆಯ ಕನ್ನಡ ಕಲಿಯುವವರಿಗೆ ಸಾಕ್ಷರತಾ ಮಿಷನ್‍ನ ಕನ್ನಡ ಸಾಕ್ಷರತಾ ಕೋರ್ಸ್‍ನ ಎರಡು ದಿನಗಳ ಕಾರ್ಯಾಗಾರವು ಜಿಲ್ಲಾ ಸಾಕ್ಷರತಾ ಮಿಷನ್ ಕಚೇರಿಯಲ್ಲಿ ಪ್ರಾರಂಭವಾಗಿದೆ. ಕನ್ನಡ ವಿಭಾಗದಲ್ಲಿ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ.
ಕಾರ್ಯಾಗಾರಕ್ಕೆ ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ ಬೇಬಿ ಬಾಲಕೃಷ್ಣನ್ ಮತ್ತು ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಕೆ ಪ್ರದೀಪನ್ ಭೇಟಿ ನೀಡಿದರು. ಕಾರ್ಯಾಗಾರದಲ್ಲಿ ಕನ್ನಡ ಅಧ್ಯಾಪಕರಾದ ಎಂ.ರಾಧಾಕೃಷ್ಣ, ಕೆ.ವಿ.ಸತ್ಯನಾರಾಯಣ ರಾವ್, ಎಂ.ವಿಶಾಲಾಕ್ಷ ಪುತ್ರಕಳ, ಶ್ರೀಲತಾ ಕೆ ಹಾಗೂ ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು ಭಾಗವಹಿಸುತ್ತಿದ್ದಾರೆ.




