ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಬೆಂಗಳೂರಿನ 2022-25ನೇ ಸಾಲಿನ ರಾಜ್ಯಸಮಿತಿ, ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾ ಘಟಕ ಸಮಿತಿ ಪದಾಧಿಕಾರಿಗಳ ಆಯ್ಕೆಗಾಗಿ ಫೆ, 27ರಂದು ರಾಜ್ಯ ಸಂಘದ ಕಚೇರಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದೆ.
ಕಾಸರಗೋಡು ಜಿಲ್ಲಾ ಘಟಕದ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯ ಸಂಸ್ಥಾಪಕ ವಾಮನ ರಆವ್ ಬೇಕಲ್ ಅವರನ್ನು ಕಾಸರಗೋಡು ಜಿಲ್ಲಾ ಘಟಕದ ಚುನಾವಣಾಧಿಕಾರಿಯನ್ನಾಗಿ ರಾಜ್ಯ ಸಮಿತಿ ಅಧ್ಯಕ್ಷ ಶಿವಾನಂದ ತಗಡೂರು ಅವರು ಆಯ್ಕೆ ಮಾಡಿದ್ದಾರೆ.




