HEALTH TIPS

ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ನ ತದ್ರೂಪಿ : ಪ್ರಧಾನಿ ಮೋದಿ ವಾಗ್ದಾಳಿ

                 ಪಠಾಣ್‌ಕೋಟ್: ಪಂಜಾಬ್ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು "ಅಪರಾಧದ ಪಾಲುದಾರರು" ಎಂದು ಆರೋಪಿಸಿದ್ದಾರೆ.

               ಎಎಪಿಯನ್ನು ಕಾಂಗ್ರೆಸ್‌ನ "ಫೋಟೋಕಾಪಿ" ಎಂದು ಕರೆದ ಅವರು, ಅಯೋಧ್ಯೆ ದೇವಸ್ಥಾನ ಅಥವಾ ಸೇನೆಯು ಏನನ್ನಾದರೂ ಮಾಡಿದಾಗ ಈ ಎರಡು ಪಕ್ಷಗಳು ಸಂತೋಷ ಪಡಲಾರವು ಎಂದು ಹೇಳಿದರು.

           ಚುನಾವಣಾ ರ್ಯಾಲಿಯಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ, "ಈ ಜನರನ್ನು ಸಹಿಸಬೇಡಿ. ಒಂದು ಪಕ್ಷ ಪಂಜಾಬ್ ಅನ್ನು ಲೂಟಿ ಮಾಡಿದೆ ಹಾಗೂ ಇನ್ನೊಂದು ಪಕ್ಷ ದಿಲ್ಲಿಯಲ್ಲಿ ಭ್ರಷ್ಟಾಚಾರ ಮಾಡುತ್ತಿದೆ" ಎಂದು ಹೇಳಿದರು.

            ದಿಲ್ಲಿಯಲ್ಲೂ ಸರಕಾರ ರಚಿಸಲು ಎಎಪಿ, ಕಾಂಗ್ರೆಸ್‌ನ ಬೆಂಬಲವನ್ನು ಪಡೆದುಕೊಂಡಿದೆ ಎಂದು ಹೇಳಿದ ಪ್ರಧಾನಿ ಮೋದಿ "ಪಂಜಾಬ್ ನಿರ್ಧರಿಸಿದೆ, ಇಸ್ಸ್ ಬಾರ್ ಪಕ್ಕಾ ಪರಿವರ್ತನ್. (ಈ ಬಾರಿ ಖಂಡಿತವಾಗಿ ಬದಲಾವಣೆ)" ಎಂದು ಅವರು ಹೇಳಿದರು.

           2016ರ ಪಠಾಣ್‌ಕೋಟ್‌ ದಾಳಿಯಲ್ಲಿ ಮಡಿದ ಯೋಧರ ತ್ಯಾಗವನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. ದಾಳಿಗೆ ಪ್ರತಿಯಾಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಹೊರತುಪಡಿಸಿ ದೇಶವೇ ಒಟ್ಟಾಗಿದೆ ಎಂದು ಹೇಳಿದರು.

             "ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರವನ್ನು ಪಂಜಾಬ್‌ನ ಜನರನ್ನು ಹಾಗೂ ನಮ್ಮ ಸೈನ್ಯವನ್ನು ಸಹ ಪ್ರಶ್ನಿಸಿದೆ. ಅವರು ಸೈನಿಕರ ತ್ಯಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ" ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries