HEALTH TIPS

ಸಾಮರಸ್ಯದ ಬಾಳ್ವೆಗೆ ಗಡಿನಾಡು ಭದ್ರ ಬುನಾದಿ- ಕನ್ನಡ ಜಾಗೃತಿ ಸಾಂಸ್ಕøತಿಕ ಉತ್ಸವದಲ್ಲಿ ಯು.ಟಿ ಖಾದರ್ ಅಭಿಮತ

                               

              ಉಚ್ಚಿಲ  : ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಂಜುನಾಥ್ ಎಜ್ಯುಕೇಷನ್ ಟ್ರಸ್ಟ್ ಮಂಗಳೂರು (ಎಂಇಟಿಎಂ) ಇವುಗಳ ಸಹಯೋಗದೊಂದಿಗೆ ಗಡಿನಾಡ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ ತೊಕ್ಕೊಟ್ಟು ಉಚ್ಚಿಲದ ಶ್ರೀ ಕೃಷ್ಣ ಕಲ್ಯಾಣ ಮಂಟಪದ ಸಂಕೋಳಿಗೆ ಸಭಾಗೃಹದಲ್ಲಿ ಜರಗಿತು. 

           ಕರ್ನಾಟಕ ವಿಧಾನಸಭಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ, ಶಾಸಕ ಯು.ಟಿ ಖಾದರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾಮರಸ್ಯದ ಬಾಳಿಗೆ ಗಡಿನಾಡು ಭದ್ರ ಬುನಾದಿಯಾಗಿದ್ದು,   ಇಲ್ಲಿನ  ಎಲ್ಲಾ ವಲಯದ  ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತಾದಾಗ ನಮ್ಮ ಭಾಷೆ ಸಾಂಸ್ಕøತಿಕವಾಗಿ ಮತ್ತಷ್ಟು ಎತ್ತರಕ್ಕೇರಲು ಸಾಧ್ಯ ಎಂದು ತಿಳಿಸಿದರು.

         ಎಂಇಟಿಎಂ ಅಧ್ಯಕ್ಷ  ಕೆ.ಪಿ ಮಂಜುನಾಥ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ನಗರಸಭೆಯ ಆಯುಕ್ತ ಮಧು ಎಸ್.ಮನೋಹರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.   ಬೆಂಗಳೂರಿನ ಸ್ವಾಮಿ ಎಂಟರ್‍ಪ್ರೈಸಸ್ ಆಡಳಿತ ನಿರ್ದೇಶಕ ಗೋ.ನಾ.ಸ್ವಾಮಿ, ರೋಟರಿ ಕ್ಲಬ್ ಮೊಡಂಕಾಪು ಘಟಕದ ಅಧ್ಯಕ್ಷ ಎಲಿಯಾಸ್ ಸಾಂಕ್ತೀಸ್,   ಅರಣ್ಯ ಅಧಿಕಾರಿ ಸೋಮಶೇಖರ್ ಹಿಪ್ಪರಗಿ, ಗುರುಪ್ರಸಾದ್ ಉಪಸ್ಥಿತರಿದ್ದರು.

            ಕಾಸರಗೋಡು ರಾಮನಾಥ ಸಾಂಸ್ಕೃತಿಕ ಭವನದ ಸಮೂಹದ ನಾಡಗೀತೆಯೊಂದಿಗೆ ಉತ್ಸವ ಆರಂಭಗೊಂಡಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಅರ್ಚನಾ ಬಂಗೇರ ಕುಂಪಲ ಮತ್ತು ಕೀರ್ತನ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಆರೀಫ್ ಕಲ್ಕಟ್ಟ ವಂದಿಸಿದರು.

           ಸಾಂಸ್ಕೃತಿಕ ಉತ್ಸವದ ಅಂಗವಾಗಿ ನಾಡು ನುಡಿಯ ಕುರಿತು ಕವನ ವಾಚನ, ರಾಮನಾಥ ಸಾಂಸ್ಕೃತಿಕ ಭವನ ಸಮೂಹ ಕಾಸರಗೋಡು ಇವರಿಂದ ಸಮೂಹ ಗಾಯನ, ಸರೋಜ ರಾವ್ ಮತ್ತು ತಂಡ ಮಂಗಳೂರು ಇವರಿಂದ ಜಾನಪದ ನೃತ್ಯ, ಹರಿದಾಸ ಜಯಾನಂದ ಕುಮಾರ್  ಸಂಯೋಜನೆಯಲ್ಲಿ ಜಯ ಜನನಿ ನಿನಾದ ಕಾಸರಗೋಡು ತಂಡದಿಂದ ಕವಿಗಾನ ಕನ್ನಡಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries