HEALTH TIPS

ಬಿಹಾರದಲ್ಲಿ ಹಕ್ಕಿಜ್ವರ ವಿಪರೀತ ಏರಿಕೆ: ವರದಿ

           ಪ್ಯಾರಿಸ್: ಬಿಹಾರದಲ್ಲಿ H5N1 (ಹಕ್ಕಿ ಜ್ವರ) ವೈರಸ್ ವಿಪರೀತ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (OIE) ಬುಧವಾರ ಹೇಳಿದೆ.

          ಕೋಳಿ ಸಾಕಣಿಕೆ ಕೇಂದ್ರವೊಂದರಲ್ಲಿ ಸಂಸ್ಥೆ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದ್ದು, ಬಿಹಾರದ ಪಾಟ್ನಾದ ಫಾರ್ಮ್ ಒಂದರಲ್ಲಿದ್ದ 3,859 ಕೋಳಿಗಳ ಪೈಕಿ 787 ಕೋಳಿಗಳು ವೈರಸ್‌ನಿಂದಾಗಿ ಸಾವಿಗೀಡಾಗಿದೆ ಎಂದು ಹೇಳಿದೆ.   ಉಳಿದ ಕೋಳಿಗಳನ್ನು ನಾಶಪಡಿಸಲಾಗಿದೆ.

ಪ್ಯಾರಿಸ್ ಮೂಲದ ಒಐಇ, ಭಾರತದಲ್ಲಿನ ಅಧಿಕೃತ ಮೂಲಗಳು ಮತ್ತು ದತ್ತಾಂಶಗಳನ್ನು ಆಧರಿಸಿ ವರದಿ ಬಿಡುಗಡೆ ಮಾಡಿದೆ.

              ಜನವರಿ 18ರಂದು ಹಕ್ಕಿಜ್ವರ ವೈರಸ್ ಕಾಣಿಸಿಕೊಂಡಿತ್ತು. ಫೆಬ್ರುವರಿ 16ರಂದು ಪಾಟ್ನಾದ ಫಾರ್ಮ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಕೋಳಿಗಳು ವೈರಸ್ ದಾಳಿಯಿಂದಾಗಿ ಸಾವಿಗೀಡಾಗಿವೆ, ಉಳಿದಿರುವ ಎಲ್ಲ ಕೋಳಿಗಳನ್ನು ನಾಶಪಡಿಸಲಾಗಿದೆ ಎಂದು ವರದಿ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries