HEALTH TIPS

ಮಾರುಕಟ್ಟೆಗೆ ಬಿಡುಗಡೆಗೊಂಡ ಬೇಡಗಂ ಅಕ್ಕಿ 'ಉಮಾ'

          ಕಾಸರಗೋಡು: ಬೇಡಗ ಗ್ರಾಮ ಪಂಚಾಯಿತಿ ವತಿಯಿಂದ ತಯಾರಿಸಿದ ಬೇಡಗಂ ರೈಸ್ ಉಮಾವನ್ನು ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಬಿಡುಗಡೆಗೊಳಿಸಿದರು. ಪಂಚಾಯತಿ ಕಾರ್ಯದರ್ಶಿ ಎ ಭರತನ್ ನಾಯರ್ 40 ಕೆಜಿ ಸಾವಯವ ಅಕ್ಕಿಯನ್ನು ಸ್ವೀಕರಿಸಿದರು. ಚಳಕಾಡು ಗದ್ದೆಯಲ್ಲಿ 2 ಎಕರೆ ಜಮೀನಿನಲ್ಲಿ ಪಡೆದ 8 ಕ್ವಿಂಟಾಲ್ 70 ಕೆಜಿ ಭತ್ತವನ್ನು ಬೇಡಗ ಕೃಷಿ ಭವನದಲ್ಲಿ ಆತ್ಮದ ನೆರವಿನಿಂದ ಸಾವಯವ ಅಕ್ಕಿಯಾಗಿ ಪರಿವರ್ತಿಸಲಾಯಿತು.

                  ಉಪಾಧ್ಯಕ್ಷ ಎ.ಮಾಧವನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲತಾ ಗೋಪಿ, ಟಿ.ವರದರಾಜ್, ಪಂಚಾಯಿತಿ ಸದಸ್ಯರಾದ ಗೋಪಾಲಕೃಷ್ಣನ್, ಶಾಂತಕುಮಾರಿ, ಪ್ರಿಯಾ, ಶೃತಿ, ನೂರ್ ಜಹಾನ್, ಗ್ರಾಮಾಧಿಕಾರಿಗಳಾದ ಅನಿಲ್ ಮುನ್ನಾದ್, ಪ್ರೇಮಕುಮಾರ್ ಉಪಸ್ಥಿತರಿದ್ದರು. ಬೇಡಗ ರೈಸ್ ಅಗತ್ಯವಿರುವವರು ಮರುತ್ತಡ್ಕದಲ್ಲಿರುವ ಗ್ರಾಮ್ಯಕಂ ಗ್ರಾಮಾಂತರ ಮಳಿಗೆಯನ್ನು ಸಂಪರ್ಕಿಸಬಹುದು. ದೂರವಾಣಿ 8136885886


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries