ಕೊಚ್ಚಿ; ಯುಪಿಐ ಪಾವತಿಗಾಗಿ ಅಂಟಿಸಲಾದ ಕ್ಯೂಆರ್ ಕೋಡ್ ಸ್ಟಿಕ್ಕರ್‍ನ ಮೇಲೆ ನಕಲಿ ಕ್ಯೂಆರ್ ಕೋಡ್ ನ್ನು ಇರಿಸುವ ಮೂಲಕ ವಂಚನೆ ನಡೆಸುವ ಹೊಸ ವಿಧಾನ ಬೆಳಕಿಗೆ ಬಂದಿದೆ. ವ್ಯಾಪಾರ ಸಂಸ್ಥೆಗಳ ಹೊರಭಾಗದಲ್ಲಿ ಅಂಟಿಸಿದ ಕ್ಯೂಆರ್ ಕೋಡ್ ಸ್ಟಿಕ್ಕರ್ ಮೇಲೆ ನಕಲಿ ಸ್ಟಿಕ್ಕರ್ ಅಂಟಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಪೇಮೆಂಟ್ ಸ್ಕ್ಯಾನ್ ಮಾಡುವಾಗ ಅಂಗಡಿಯ ಹೊರಭಾಗದಲ್ಲಿ ನಕಲಿ ಸ್ಟಿಕ್ಕರ್ ಅಂಟಿಸಿರುವುದು ನಮ್ಮ ಗಮನಕ್ಕೆ ಬಾರದೇ ಇರುವುದರಿಂದ ವಂಚಕರ ಖಾತೆಗೆ ಹಣ ಹೋಗುತ್ತದೆ. ವ್ಯಾಪಾರಿಗಳು ಕ್ಯೂ ಕೋಡ್ ತಮ್ಮದಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಸ್ಕ್ಯಾನಿಂಗ್ ಮಾಡುವಾಗ ಗ್ರಾಹಕರು ಜಾಗರೂಕರಾಗಿರಬೇಕು ಎಂದು ಕೇರಳ ಪೋಲೀಸರು ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.




