ನವದೆಹಲಿ: :ಕ್ರಿಪ್ಟೋಕರೆನ್ಸಿ ಎಂದಿಗೂ ಕಾನೂನಬದ್ಧ ಕರೆನ್ಸಿಯಾಗುವುದಿಲ್ಲ ಎಂದು ಗುರುವಾರ ಹೇಳುವ ಮೂಲಕ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್, ಖಾಸಗಿ ಡಿಜಿಟಲ್ ಕರೆನ್ಸಿಗಳ ಕಾನೂನುಬದ್ಧತೆಯ ವದಂತಿಗೆ ತೆರೆ ಎಳೆದಿದ್ದಾರೆ.
0
samarasasudhi
ಫೆಬ್ರವರಿ 04, 2022
ನವದೆಹಲಿ: :ಕ್ರಿಪ್ಟೋಕರೆನ್ಸಿ ಎಂದಿಗೂ ಕಾನೂನಬದ್ಧ ಕರೆನ್ಸಿಯಾಗುವುದಿಲ್ಲ ಎಂದು ಗುರುವಾರ ಹೇಳುವ ಮೂಲಕ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್, ಖಾಸಗಿ ಡಿಜಿಟಲ್ ಕರೆನ್ಸಿಗಳ ಕಾನೂನುಬದ್ಧತೆಯ ವದಂತಿಗೆ ತೆರೆ ಎಳೆದಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸೋಮನಾಥ್ ಅವರು, ಚಿನ್ನ ಹಾಗೂ ವಜ್ರಗಳಂತೆ ವೌಲ್ಯವನ್ನು ಹೊಂದಿದ್ದರೂ ಕ್ರಿಪ್ಟೋ ಕಾನೂನುಬದ್ಧ ಕರೆನ್ಸಿ ಅಲ್ಲ.
''ಕ್ರಿಪ್ಟೋಕರೆನ್ಸಿಗಳು ಕಾನೂನು ಬದ್ಧ ಕರೆನ್ಸಿ ಆಗದು. ಕಾನೂನು ಪ್ರಕಾರ ಕಾನೂನಬದ್ಧ ಕರೆನ್ಸಿ ಎಂದರೆ ಸಾಲಗಳ ಇತ್ಯರ್ಥದಲ್ಲಿ ಅದನ್ನು ಸ್ವೀಕರಿಸಲು ಸಾಧ್ಯವಾಗಬೇಕು. ಭಾರತ ಕ್ರಿಪ್ಟೊಕರೆನ್ಸಿಯನ್ನು ಎಂದಿಗೂ ಕಾನೂನುಬದ್ಧ ಕರೆನ್ಸಿಯಾಗಿ ಮಾಡುತ್ತಿಲ್ಲ. ರಿಸರ್ವ್ ಬ್ಯಾಂಕ್‌ನ ಡಿಜಿಟಲ್ ರೂಪಾಯಿ ಮಾತ್ರ ಭಾರತದಲ್ಲಿ ಕಾನೂನುಬದ್ಧ ಕರೆನ್ಸಿ'' ಎಂದು ಸೋಮನಾಥನ್ ಹೇಳಿದ್ದಾರೆ.
ಕ್ರಿಪ್ಟೋ ಕರೆನ್ಸಿಗಳನ್ನು ನಿಯಂತ್ರಿಸಲು ಕಾನೂನುಬದ್ಧಗೊಳಿಸುವಿಕೆಯ ಕಾರ್ಯದಲ್ಲಿ ಭಾರತ ತೊಡಗಿಕೊಂಡಿದೆ. ಆದರೆ, ಇದುವರೆಗೆ ಯಾವುದೇ ಕರಡನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.