HEALTH TIPS

ಕಣ್ಣೂರಿನಲ್ಲಿ 1.5 ಕೋಟಿ ಡ್ರಗ್ಸ್ ಪತ್ತೆ: ರಾಜಕೀಯ ಪಕ್ಷದ ಕಾರ್ಯಕರ್ತ ಮತ್ತು ಆತನ ಪತ್ನಿಯ ಬಂಧನ

                     ಕಣ್ಣೂರು: ಕಣ್ಣೂರಿನಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ಬೇಟೆ ನಡೆದಿದೆ. ಈ ಸಂಬಂಧ ಬಂಧನಕ್ಕೊಳಗಾದ ದಂಪತಿಯನ್ನು ಬಂಧಿಸಿರುವ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಹೊರಬಿದ್ದಿದೆ. ಇದು ರಾಜ್ಯದ ಅತಿ ದೊಡ್ಡ ಮಾದಕ ದ್ರವ್ಯ ದಂಧೆ ಎಂದು ಪೋಲೀಸರು ತಿಳಿಸಿದ್ದಾರೆ. ಕಣ್ಣೂರು ಟೌನ್ ಇನ್ಸ್ ಪೆಕ್ಟರ್ ಶ್ರೀಜಿತ್ ಅವರಿಗೆ ದೊರೆತ ಗೌಪ್ಯ ಮಾಹಿತಿ ಮೇರೆಗೆ ನಡೆಸಿದ ತನಿಖೆಯಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಕಣ್ಣೂರು ಮೂಲದ ಅಫ್ಜಲ್ ಹಾಗೂ ಆತನ ಪತ್ನಿ ಬಲ್ಕೀಸ್ ಬಂಧಿತ ಆರೋಪಿಗಳು. ಅಫ್ಜಲ್ ಸಕ್ರಿಯ ಸಿಪಿಎಂ ಕಾರ್ಯಕರ್ತ ಎನ್ನಲಾಗಿದೆ.

             ಬಂಧಿತರ ವಶದಲ್ಲಿದ್ದ ಸುಮಾರು 2 ಕೆಜಿ ಎಂಡಿಎಂಎ, 7.5 ಗ್ರಾಂ ಒಪಿಎಂ ಮತ್ತು 67 ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ.  ಈ ಡ್ರಗ್ಸ್ ಮೌಲ್ಯ 1 ಕೋಟಿ ರೂ. ಆಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಬೆಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಟೂರಿಸ್ಟ್ ಬಸ್‍ನಲ್ಲಿ ಸಾಮಾಗ್ರಿಗಳ ಪಾರ್ಸೆಲ್ ಮರೆಯಲ್ಲಿ ಈ  ಮಾದಕ ದ್ರವ್ಯ ಸಾಗಾಟ ಮಾಡಲಾಗಿತ್ತು.

          ಪೋಲೀಸರು ಕಣ್ಣೂರಿನ ಪ್ಲಾಜಾ ಜಂಕ್ಷನ್‍ನಲ್ಲಿರುವ ಪಾರ್ಸೆಲ್ ಕಚೇರಿಗೆ ಆಗಮಿಸಿ ಆರೋಪಿಗಳಿಂದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಅಫ್ಜಲ್ ಅವರ ಪತ್ನಿ ಬಲ್ಕೀಸ್ ಅವರು ಈ ಹಿಂದೆ ಎಡಕ್ಕಾಡ್ ಪೆÇಲೀಸ್ ಠಾಣೆಯಲ್ಲಿ ಮತ್ತೊಂದು ಮಾದಕ ದ್ರವ್ಯ ಪ್ರಕರಣ ದಾಖಲಿಸಲಾಗಿತ್ತು ಎಂದು ಜಿಲ್ಲಾ ಪೆÇಲೀಸ್ ಆಯುಕ್ತ ಆರ್.ಇಲಂಗೋ ತಿಳಿಸಿದ್ದಾರೆ. ಆರೋಪಿಗಳು ವಾಟ್ಸಾಪ್ ಮೂಲಕ ಮಾದಕ ವ್ಯಸನಿಗಳನ್ನು ಪತ್ತೆ ಮಾಡುತ್ತಾರೆ.

                  ಅವುಗಳನ್ನು ಅಗತ್ಯವಿರುವವರಿಗೆ ಸಣ್ಣ ಪ್ಯಾಕೇಜ್‍ಗಳಲ್ಲಿ ತಲುಪಿಸಲಾಗುತ್ತದೆ. ಪೊಟ್ಟಣವನ್ನು ರಸ್ತೆಬದಿಯಲ್ಲಿ ಇರಿಸಿ ಗ್ರಾಹಕರಿಗೆ ದಾಟಿಸುವ ಕ್ರಮ ಅನುಸರಿಸುತ್ತಿದ್ದರು. ಬಂಧಿತರಿಬ್ಬರು ಕಣ್ಣೂರಿನ ಡ್ರಗ್ಸ್ ಗ್ಯಾಂಗ್‍ನ ಪ್ರಮುಖರು. ಕಣ್ಣೂರು ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆಯ ಕುರಿತು ವ್ಯಾಪಕ ತನಿಖೆ ನಡೆಸಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries