HEALTH TIPS

2022ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ 1,600 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆ: ಚುನಾವಣಾ ಆಯುಕ್ತ

                ನವದೆಹಲಿ:2022 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 6,900 ಅಭ್ಯರ್ಥಿಗಳಲ್ಲಿ 1,600 ಕ್ಕೂ ಹೆಚ್ಚು ಜನರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿರುವುದಾಗಿ ANI ವರದಿ ಮಾಡಿದೆ.

           ʼನಿಮ್ಮ ಅಭ್ಯರ್ಥಿಯನ್ನು ತಿಳಿದುಕೊಳ್ಳಿ' (Know your candidate) ಅಪ್ಲಿಕೇಶನ್ ಚುನಾವಣಾ ಆಯೋಗದ ಯಶಸ್ವಿ ಉಪಕ್ರಮವಾಗಿದ್ದು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಮತದಾರರಿಗೆ ತಿಳಿದಿರಬೇಕು ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು.


            ಆದ್ದರಿಂದ, ನಾವು ಈ ಅಪ್ಲಿಕೇಶನ್ ಅನ್ನು ರಚಿಸಿದ್ದೇವೆ. ಸ್ಪರ್ಧಿಸಿದ್ದ 6,900 ಅಭ್ಯರ್ಥಿಗಳಲ್ಲಿ 1,600 ಕ್ಕೂ ಹೆಚ್ಚು ಜನರು ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಎಂದು ಅವರು ತಿಳಿಸಿದ್ದಾರೆ.

           ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಓಮಿಕ್ರಾನ್ ಅಲೆ ಸಂದರ್ಭದಲ್ಲಿ ಚುನಾವಣಾ ರ್ಯಾಲಿಗಳ ಮೇಲೆ ನಿಷೇಧದ ಹೇರಲಾಗಿತ್ತು. ಎಲ್ಲಾ 5 ರಾಜ್ಯಗಳಲ್ಲಿ ಕೋವಿಡ್ ಮಾನದಂಡಗಳ ಉಲ್ಲಂಘನೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಸುಮಾರು 2,270 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಚುನಾವಣಾ ಆಯೋಗಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಒಂದೇ" ಎಂದು ಅವರು ತಿಳಿಸಿದ್ದಾರೆ.

               ಇವಿಎಂ ಟ್ಯಾಂಪರಿಂಗ್‌ ಕುರಿತು ಮಾತನಾಡಿದ ಅವರು, ಇವಿಎಂ ತಿರುಚುವ ಪ್ರಶ್ನೆಯೇ ಇಲ್ಲ. ಇವಿಎಂಗಳನ್ನು 2004 ರಿಂದ ನಿರಂತರವಾಗಿ ಬಳಸಲಾಗುತ್ತಿದೆ, 2019 ರಲ್ಲಿ ನಾವು ಪ್ರತಿ ಮತಗಟ್ಟೆಯಲ್ಲಿ ವಿವಿಪ್ಯಾಟ್ ಬಳಸಲು ಪ್ರಾರಂಭಿಸಿದ್ದೇವೆ. ರಾಜಕೀಯ ಪಕ್ಷದ ಏಜೆಂಟರ ಸಮ್ಮುಖದಲ್ಲಿ ಇವಿಎಂಗಳನ್ನು ಸೀಲ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

             ವಾರಣಾಸಿಯಲ್ಲಿ ತರಬೇತಿಗೆ ಬಳಸುವ ಇವಿಎಂ ಯಂತ್ರಗಳನ್ನು ಸಾಗಾಟ ಮಾಡಿರುವುದು ವಿವಾದ ಆಗಿದೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದ ಪ್ರಕಾರ ತರಬೇತಿ ಉದ್ದೇಶಗಳಿಗಾಗಿ ಇವಿಎಂಗಳ ಸಾಗಾಟದ ಬಗ್ಗೆ ರಾಜಕೀಯ ಪಕ್ಷಗಳಿಗೆ ತಿಳಿಸದಿರುವುದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ತಪ್ಪು ಎಂದು ಅವರು ಹೇಳಿದ್ದಾರೆ.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries