ಕೊಚ್ಚಿ: ನಗರದಲ್ಲಿ ಭಾರೀ ಪ್ರಮಾಣದ ರಕ್ತ ಚಂದನ ಬೇಟೆ ನಡೆದಿದೆ. ಕೊಚ್ಚಿ ತೀರದಲ್ಲಿ ಡಿಆರ್‍ಡಿಒ 2,200 ಕೆಜಿ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶದಿಂದ ಕೊಚ್ಚಿಗೆ ಸಾಗಿಸಿ ನಂತರ ದುಬೈಗೆ ಸಾಗಿಸಲು ಯತ್ನಿಸಲಾಗಿತ್ತು ಎಂದು ತಿಳಿದು ಬಂದಿದೆ.
5,600 ಲೀಟರ್ ಸಾಮಥ್ರ್ಯದ ಎರಡು ಉಕ್ಕಿನ ತೈಲ ಟ್ಯಾಂಕರ್‍ಗಳಲ್ಲಿ ರಕ್ತ ಚಂದನದ ತುಂಡುಗಳನ್ನು ಬಚ್ಚಿಡಲಾಗಿತ್ತು. ತೊಟ್ಟಿಯೊಳಗೆ ಹುಲ್ಲಿನಲ್ಲಿ ಸುತ್ತಿ ರಕ್ತ ಚಂದನವನ್ನು ಬಚ್ಚಿಟ್ಟಿದ್ದರು. ತೊಟ್ಟಿಯ ಹೊರ ಪದರಗಳನ್ನು ಕಟ್ಟರ್‍ನಿಂದ ಕತ್ತರಿಸಿ ರಕ್ತಚಂದನವನ್ನು ಹೊರತೆಗೆಯಲಾಯಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 3 ಸಾವಿರ ರೂ.ವರೆಗೆ ಮೌಲ್ಯ ಬೆಲೆ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಗಂಧ ತಂದವರ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಡಿಆರ್ ಐ ತಿಳಿಸಿದೆ.





