ತಿರುವನಂತಪುರ: ಸಿಲ್ವರ್ ಲೈನ್ ಯೋಜನೆ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಹೈಸ್ಪೀಡ್ ರೈಲು ಕಾರಿಡಾರ್ ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಫೇಸ್ ಬುಕ್ ಪೆÇೀಸ್ಟ್ ಗೆ ಶಾಸಕ ಪಿವಿ ಅನ್ವರ್ ವಾಗ್ದಾಳಿ ನಡೆಸಿದ್ದಾರೆ. ಕೆ ರೈಲ್ ಯೋಜನೆ ವಿರುದ್ಧ ಯುಡಿಎಫ್ ನೇತೃತ್ವದ ಪ್ರತಿಪಕ್ಷಗಳ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಉಮ್ಮನ್ ಚಾಂಡಿ ಅವರ ಹಳೆಯ ಫೇಸ್ ಬುಕ್ ಪೋಸ್ಟ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಇದು ಚಾಂಡಿ ಸರ್ ಅವರ ಕನಸಿನ ಯೋಜನೆಯೂ ಹೌದು ಎಂದು ಶಾಸಕ ಪಿವಿ ಅನ್ವರ್ ಲೇವಡಿ ಮಾಡಿದ್ದಾರೆ. “ಇದೂ ಕೂಡ ಚಾಂಡಿ ಸರ್ ಅವರ ಕನಸಿನ ಪ್ರಾಜೆಕ್ಟ್, ರೀಚ್ ತುಂಬಾ ಕಡಿಮೆ ಇದೆ ಅಂತ ಏನಾದ್ರೂ ಹೇಳ್ತಾರಾ?! - ಎಂದು ಶಾಸಕರು ಪೋಸ್ಟ್ ಮಾಡಿದ್ದಾರೆ.
ಹೈಸ್ಪೀಡ್ ರೈಲ್ ಕಾರಿಡಾರ್ ಗೆ ಸಂಬಂಧಿಸಿದಂತೆ 2012ರ ಡಿಸೆಂಬರ್ 12ರಂದು ಉಮ್ಮನ್ ಚಾಂಡಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದ ಪೋಸ್ಟ್ ನ್ನು ಅನ್ವರ್ ಇದೀಗ ಪೋಸ್ಟ್ ಮಾಡಿದ್ದಾರೆ. "ಹೈಸ್ಪೀಡ್ ರೈಲ್ ಕಾರಿಡಾರ್ ಯೋಜನೆ ಬಗ್ಗೆ ವಿಸ್ತೃತ ಚರ್ಚೆಯ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಜನರು ಆತಂಕಕ್ಕೊಳಗಾಗಬೇಕಿಲ್ಲ. 527 ಕಿ.ಮೀ ಉದ್ದದ ರೈಲ್ವೆ ಯೋಜನೆಗೆ 118,000 ಕೋಟಿ ರೂ. ವೆಚ್ಚದ ನಿರೀಕ್ಷೆಯಿದೆ. ತಿರುವನಂತಪುರದಿಂದ ಕಾಸರಗೋಡಿಗೆ ಮೂರು ಗಂಟೆಗಳಲ್ಲಿ ತಲಪಲು ಸಾಧ್ಯವಾಗುತ್ತದೆ. ಕೊಲ್ಲಂಗೆ 15 ನಿಮಿಷಗಳು ಮತ್ತು ಕೊಚ್ಚಿಗೆ 53 ನಿಮಿಷಗಳು" ಎಂದು ಉಮ್ಮನ್ ಚಾಂಡಿ ಅವರ ಹಳೆಯ ಪೋಸ್ಟ್ ಹೇಳಿದೆ.
ಕೇರಳದ ಹೋರಾಟದ ಇತಿಹಾಸದಲ್ಲಿ ಸಿಲ್ವರ್ ಲೈನ್ ವಿರೋಧಿ ಆಂದೋಲನವು ಐತಿಹಾಸಿಕ ಘಟನೆಯಾಗಲಿದೆ ಎಂದು ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮೊನ್ನೆ ಹೇಳಿದ್ದರು. ಮುಖ್ಯಮಂತ್ರಿ ಧೈರ್ಯ ಮತ್ತು ದುರಹಂಕಾರದಿಂದ ಮುಂದುವರಿದರೆ ನಂದಿಗ್ರಾಮದಲ್ಲಿ ನಡೆದದ್ದೇ ಕೇರಳದ ಸಿಪಿಎಂಗೆ ಉಂಟಾಗಲಿದೆ. ಕಲ್ಲುಗಳನ್ನು ತೆಗೆದರೆ ಸಾರ್ವಜನಿಕ ಆಸ್ತಿಪಾಸ್ತಿ ನಾಶಪಡಿಸಿ ಜೈಲಿಗೆ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಯುಡಿಎಫ್ ರ್ಯಾಲಿಗಳ ಮೂಲಕ ಕೇರಳದಲ್ಲಿ ಅಭೂತಪೂರ್ವ ಜನಾಂದೋಲನಕ್ಕೆ ತೊಡಗಿಸಿಕೊಳ್ಳಲಿದೆ ಎಂದು ಸತೀಶನ್ ಹೇಳಿದ್ದರು.




.webp)
