HEALTH TIPS

ದುರ್ವಿಧಿಯೇ! ಮಿಕ್ಸ್ಚರ್ ತಿನ್ನುವಾಗ ಗಂಟಲಿಗೆ ಕಡಲೆಬೀಜ ಸಿಲುಕಿ 4ರ ಬಾಲಕಿ ದುರಂತ ಸಾವು

             ಕೊಚ್ಚಿ: ಕಡಲೆಬೀಜ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕೊಯಿಕ್ಕೋಡ್​ನ ನಾರತ್​ ವೆಸ್ಟ್​ನಲ್ಲಿ ನಡೆದಿದೆ.

              ಮೃತ ಬಾಲಕಿಯನ್ನು ತಾನ್ವಿ ಎಂದು ಗುರುತಿಸಲಾಗಿದೆ. ಮೃತ ತಾನ್ವಿ, ಪ್ರವೀಣ್​ ಮತ್ತು ಶರಣ್ಯಾ ದಂಪತಿಯ ಒಬ್ಬಳೇ ಮಗಳು.

             ಕಣ್ಣೂರಿನಲ್ಲಿರುವ ಇಂಡಿಯನ್​ ಪಬ್ಲಿಕ್​ ಸ್ಕೂಲ್​ನ ಕಿಂಡರ್​ಗಾರ್ಡನ್​ ವಿದ್ಯಾರ್ಥಿನಿಯಾಗಿದ್ದಳು. ಒಬ್ಬಳೇ ಮಗಳನ್ನು ಕಡೆದುಕೊಂಡ ಪ್ರವೀಣ್​-ಶರಣ್ಯಾ ದಂಪತಿ ಇದೀಗ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

                ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಈ ಘಟನೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಮಿಕ್ಸ್ಚರ್ ಸ್ನ್ಯಾಕ್​ ತಿನ್ನುವಾಗ ಅದರಲ್ಲಿದ್ದ ಕಡಲೆಬೀಜ ತಾನ್ವಿಯ ಗಂಟಲಲ್ಲಿ ಸಿಲುಕಿ ಉಸಿರಾಡಲು ಆಗದೇ ತಾನ್ವಿ ಕೊನೆಯುಸಿರೆಳೆದಿದ್ದಾಳೆ.

           ಕೊಯಿಲ್ಯಾಂಡಿ ತಾಲೂಕು ಆಸ್ಪತ್ರೆಯಿಂದ ಕೊಯಿಕ್ಕೋಡ್​ ವೈದ್ಯಕೀಯ ಕಾಲೇಜಿಗೆ ಸಾಗಿಸುವಾಗ ಮಾರ್ಗ ಮಧ್ಯೆ ತಾನ್ವಿ ಮೃತಪಟ್ಟಿದ್ದಾಳೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries