HEALTH TIPS

ಸಾವಯವ ಕೃಷಿಕ, ಉದ್ಯಮಿ, ಹಾವು ರಕ್ಷಕ ಮಹಿಳೆ ಸೇರಿ 29 ಮಹಿಳೆಯರಿಗೆ ನಾರಿ ಶಕ್ತಿ ಪ್ರಶಸ್ತಿ ಪ್ರದಾನ

            ನವದೆಹಲಿ: ಹಾವು ರಕ್ಷಕ ಮಹಿಳೆ, ಡೌನ್ ಸಿಂಡ್ರೋಮ್ ಪೀಡಿತ ಕತಕ್ ನೃತ್ಯಗಾರ್ತಿ ಸೇರಿದಂತೆ 29 ಮಹಿಳಾ ಸಾಧಕರಿಗೆ ನಾರಿ ಶಕ್ತಿ ಪ್ರಶಸ್ತಿಯನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಪ್ರದಾನ ಮಾಡಲಾಗಿದೆ. 

            2020 ಹಾಗೂ 2021 ರಲ್ಲಿ ತಲಾ 14 ಪ್ರಶಸ್ತಿಗಳನ್ನು 29 ಮಹಿಳೆಯರಿಗೆ ಅವರ ಸಾಧನೆಯನ್ನು ಪ್ರಮುಖವಾಗಿ ದುರ್ಬಲ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಮಾಡಿದ ಸೇವೆಯನ್ನು ಗುರುತಿಸಿ ನೀಡಲಾಗಿದೆ.

                 ಹಾವು ರಕ್ಷಣೆಯಲ್ಲಿ ತೊಡಗಿರುವ ಮೊದಲ ಮಹಿಳೆ, ಸೋಯರ್ ವಂಚರೆ ವಿವಿಧೋದ್ದೇಶ ಫೌಂಡೇಶನ್ ಸ್ಥಾಪಿಸಿರುವ ವಿನೀತಾ ಜಗದೇವ್ ಬೋರಡೆ ಅವರಿಗೆ ನೀಡಲಾಗಿದೆ. 

              ವಿನೀತಾ ಜಗದೇವ್ ಬೋರಡೆ, ಪ್ರಕೃತಿ ಮತ್ತು ವನ್ಯಜೀವಿ ರಕ್ಷಣೆ ಮತ್ತು ಮಾಲಿನ್ಯ ಮುಕ್ತ ಪರಿಸರವನ್ನು ಉತ್ತೇಜಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈವರೆಗೂ 50,000 ಹಾವುಗಳನ್ನು ರಕ್ಷಿಸಿ ಅವುಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನಕ್ಕೆ ಕಳಿಸಿದ್ದಾರೆ. 

              ಹಾವು ಕಚ್ಚಿದವರಿಗೆ ಪ್ರಥಮ ಚಿಕಿತ್ಸೆ ಮಾಡುವುದೂ ಸೇರಿದಂತೆ ಹಾವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನೂ ವಿನೀತಾ ಜಗದೇವ್ ಬೋರಡೆ ನಡೆಸುತ್ತಿದ್ದು ಸ್ನೇಕ್ ಫ್ರೆಂಡ್ ಎಂದೇ ಗುರುತಿಸಿಕೊಂಡಿದ್ದಾರೆ. 

          ಇನ್ನು ಡೌನ್ ಸಿಂಡ್ರೋಮ್ ಸಮಸ್ಯೆ ಎದುರಿಸುತ್ತಿರುವ ಕಥಕ್ ನೃತ್ಯಗಾರ್ತಿ ಸೈಲೀ ನಂದಕಿಶೋರ ಆಗವಾನೆ ಜಾಗತಿಕ ಒಲಿಂಪಿಯಾಡ್ ನೃತ್ಯ ಸ್ಪರ್ಧೆಯಲ್ಲಿ 100 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು, ಕಂಚಿನ ಪದಕವನ್ನು ಪಡೆದಿದ್ದಾರೆ. ಸಮಸ್ಯೆಯ ಹೊರತಾಗಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಪ್ರಚಾರ ಮಾಡಿದ್ದಕ್ಕಾಗಿ ನಾರಿ ಶಕ್ತಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇನ್ನು ದೃಷ್ಟಿಹೀನ ಸಾಮಾಜಿಕ ಕಾರ್ಯಕರ್ತರಾದ ಟಿಫಾನಿ ಬ್ರಾರ್ ಅವರು ದೃಷ್ಟಿಹೀನ ಗ್ರಾಮೀಣ ಮಹಿಳೆಯರೆಡೆಗೆ ಮಾಡಿದ ಮಾದರಿ ಕೆಲಸಗಳನ್ನು ಗುರುತಿಸಿ ನಾರಿಶಕ್ತಿ ಪ್ರಶಸ್ತಿ ನೀಡಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries