HEALTH TIPS

ಮಾ.31'ರ ಒಳಗೆ ಪಿಎಎನ್- ಆಧಾರ್ ಜೋಡಣೆಯಾಗದೇ ಇದ್ದಲ್ಲಿ 500-1,000 ರೂ ದಂಡ!

    ನವದೆಹಲಿ: ಪಿಎಎನ್-ಆಧಾರ್ ಜೋಡಣೆ ಮಾಡದೇ ಇರುವ ತೆರಿಗೆದಾರರು ಮಾ.31 ಕ್ಕೂ ಮುನ್ನ ಜೋಡಣೆ ಮಾಡದೇ ಇದ್ದಲ್ಲಿ 500 ರಿಂದ 1,000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 

     ಆಧಾರ್-ಪಿಎಎನ್ ಜೋಡಣೆಗೆ ಮಾ.31, 2022 ಕೊನೆಯ ದಿನವಾಗಿದ್ದು, ಜೋಡಣೆ ಮಾಡದೇ ಇದ್ದಲ್ಲಿ ಪಿಎಎನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. 


       ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಗಡುವು ಮೀರಿ, ಮೂರು ತಿಂಗಳ ಬಳಿಕ ಅಥವಾ ಜೂ.30 ವೇಳೆಗೆ ಜೋಡಣೆ ಮಾಡಿದಲ್ಲಿ 500 ರೂಪಾಯಿ ದಂಡ, ಈ ಅವಧಿಯೂ ಮುಕ್ತಾಯಗೊಂಡ ಬಳಿಕ ಜೋಡಣೆ ಮಾಡಿದರೆ 1,000 ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ. ಜೋಡಣೆಯೇ ಮಾಡದೇ ಇದ್ದಲ್ಲಿ ಪಿಎಎನ್ ನಿಷ್ಕ್ರಿಯಗೊಳ್ಳಲಿದ್ದು, ದಂಡ ಪಾವತಿಸಿದ ಬಳಿಕವಷ್ಟೇ ಸಕ್ರಿಯವಾಗಲಿದೆ ಎಂದು ಸಿಬಿಡಿಟಿ ಅಧಿಸೂಚನೆಯಲ್ಲಿ ಮಾ.29 ರಂದು ತಿಳಿಸಿದೆ.
 
     ಟ್ಯಾಕ್ಸ್ ಪಾರ್ಟ್ನರ್, ಎಕೆಎಂ ಗ್ಲೋಬಲ್ ನ ಅಮಿತ್ ಮಹೇಶ್ವರಿ ಈ ಬಗ್ಗೆ ಮಾತನಾಡಿದ್ದು ಸರ್ಕಾರ ಪಿಎಎನ್- ಆಧಾರ್ ಜೋಡಣೆಗೆ ಹಲವು ಬಾರಿ ಗಡುವು ವಿಸ್ತರಿಸಿತ್ತು. ಈಗ ಅಂತಿಮ ಹಂತದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಪಿಎಎನ್ ನಿಷ್ಕ್ರಿಯಗೊಂಡಲ್ಲಿ, ಆ ನಿರ್ದಿಷ್ಟ ವ್ಯಕ್ತಿಗೆ ಆರ್ಥಿಕ ವಹಿವಾಟುಗಳನ್ನು ನಡೆಸುವುದು ಕಷ್ಟವಾಗಬಹುದಾಗಿದೆ. ಆದಾಯ ತೆರಿಗೆ ಪೋರ್ಟಲ್ ನ್ನು ಬಳಸದೇ ಇರುವವರು ಎಸ್ಎಂಎಸ್ ಮೂಲಕ ಪ್ಯಾನ್-ಆಧಾರ್ ಜೋಡಣೆ ಮಾಡಬಹುದಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries