ಬದಿಯಡ್ಕ: ಪೆರಡಾಲ ಉದನೇಶ್ವರ ಯಕ್ಷಗಾನ ಕಲಾ ಸಂಘದ 40ನೇ ವಾರ್ಷಿಕೋತ್ಸವದ ಅಂಗವಾಗಿ ಶಿವರಾತ್ರಿಯಂದು ಪೆರಡಾಲ ಉದನೇಶ್ವರ ಸನ್ನಿಧಿಯಲ್ಲಿ ನಡೆದ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಉದನೇಶ್ವರ ಕಲಾ ಸಂಘದ ಹಿರಿಯ ಕಲಾವಿದರಾದ ಯು.ವಸಂತ. ಕನಕಪಾಡಿ ಹಾಗೂ ಚಂದ್ರಶೇಖರ ರೈ ವಳಮಲೆ ಇವರಿಗೆ ಶಾಲು ಫಲಪುಷ್ಪ ತಾಂಬೂಲ, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು.
ಆಡಳಿತ ಮೊಕ್ತೇಸರ ನ್ಯಾಯವಾದಿ ವೆಂಕಟ್ರಮನ ಭಟ್, ಶ್ರೀ ಉದನೇಶ್ವರ ಭಕ್ತವೃಂದದ ಅಧ್ಯಕ್ಷ ತಿರುಪತಿ ಕುಮಾರ್ ಭಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ದೈವನರ್ತಕ ಡಾ. ರವೀಶ್ ಪರವ, ಟ್ರಸ್ಟಿಗಳಾದ ಪಿಜಿ ಜಗನ್ನಾಥ ರೈ, ಕೃಷ್ಣ ಪೆರಡಾಲ, ಜಗದೀಶ್ ಪೆರಡಾಲ,ಉದನೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ವಿಷ್ಣುಮೂರ್ತಿ ಸೇವಾ ಸಮಿತಿ ಬದಿಯಡ್ಕ ಇದರ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ವಳಮಲೆ, ಭಕ್ತವೃಂದದ ಪದಾಧಿಕಾರಿಗಳಾದ ಚಂದ್ರಹಾಸ, ಸದಾಶಿವ ಪೆರಡಾಲ, ಯೋಗೀಶ್ ಪೆರಡಾಲ, ಪರಮೇಶ್ವರ ನಾಯ್ಕ, ಪುರುಷೋತ್ತಮ ಆಚಾರ್ಯ, ಭಕ್ತವೃಂದದ ಕಾರ್ಯದರ್ಶಿ ರಾಮ ಮುರಿಯಂಕ್ಕೂಡ್ಲು ಉಪಸ್ಥಿತರಿದ್ದರು.



