ಕಾಸರಗೋಡು: ನೂರಾರು ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡಿ ಬೆಳೆಸಿದ ಸಂಸ್ಥೆ ರಂಗಚಿನ್ನಾರಿ. ಕಳೆದ ಹಲವು ವರ್ಷಗಳಿಂದ ಮಕ್ಕಳ ಪ್ರತಿಭೆಯನ್ನು ಬೆಳಗಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನೂ ಬೆಳಕಿಗೆ ತಂದ ಹಿರಿಮೆ ಈ ಸಂಸ್ಥೆಯದ್ದು ಎಂದು ಖ್ಯಾತ ಘಟಂ ಕಲಾವಿದ ಬಿ.ಜಿ.ಈಶ್ವರ ಭಟ್ ಹೇಳಿದರು.
ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಮೇಘರಂಜನಾ ಟ್ರಸ್ಟ್ ಕೊಪ್ಪಲ್ ಹಾಗು ಬಾದಾರ ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮಯೂರು ಮಂಟಪದಲ್ಲಿ ನಡೆದ ಭಕ್ತಿ-ಭಾವ-ಜನಪದ ಗೀತೆಗಳ ಗಾಯನ ನಡೆ-ನುಡಿ ಕನ್ನಡ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ, ನಿವೃತ್ತ ಉಪನ್ಯಾಸಕ ಡಾ.ನಾ.ದಾ.ಶೆಟ್ಟಿ, ಶ್ರೀ ಕ್ಷೇತ್ರ ಶೇಷವನ ಅನುವಂಶಿಕ ಮೊಕ್ತೇಸರ ಸದಾಶಿವ, ಬ್ಲಾಕ್ ಪಂಚಾಯತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯತಿ ಸದಸ್ಯ ಸಂಪತ್ ಪೆರ್ನಡ್ಕ, ಶೇಷವನ ಮಹಿಳಾ ಸಂಘದ ರಕ್ಷಾಧಿಕಾರಿ ಆಶಾ ಉಪಾಧ್ಯಾಯ, ಶೇಷವನ ಮಹಿಳಾ ಸಂಘ ಅಧ್ಯಕ್ಷೆ ರತ್ನ ಪಾಯ್ಚಾಲ್, ಶೇಷವನ ಯುವಕ ಸಂಘ ಅಧ್ಯಕ್ಷ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದಭರ್Àದಲ್ಲಿ ಖ್ಯಾತ ಹಾರ್ಮೋನಿಯಂ ವಾದಕ ಭಾಸ್ಕರ ಕೂಡ್ಲು ಅವರನ್ನು ಸಮ್ಮಾನಿಸಲಾಯಿತು. ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ನಾೈಕ್ ವಂದಿಸಿದರು.
ಪ್ರಶಸ್ತಿ ವಿಜೇತ ಗಾಯಕ ಮುಲ್ಕಿ ರವೀಂದ್ರ ಪ್ರಭು, ಪ್ರಶಸ್ತಿ ವಿಜೇತ ಗಾಯಕಿ ಮಾಲಿನಿ ಕೇಶವ ಪ್ರಸಾದ್, ಖ್ಯಾತ ಗಾಯಕ ಕಿಶೋರ್ ಪೆರ್ಲ ಅವರಿಂದ ಭಕ್ತಿ-ಭಾವ-ಜನಪದ ಗೀತೆಗಳ ಗಾಯನ ನಡೆಯಿತು. ಕೀಬೋರ್ಡ್‍ನಲ್ಲಿ ಪುರುಷೋತ್ತಮ ಕೊಪ್ಪಲ್, ತಬ್ಲಾದಲ್ಲಿ ಅಭಿಜಿತ್ ಶೆಣೈ, ರಿದಂ ಪ್ಯಾಡ್‍ನಲ್ಲಿ ರಾಜೇಶ್ ಭಾಗವತ್ ಸಹಕರಿಸಿದರು.



