HEALTH TIPS

ಕೇರಳದಲ್ಲಿ ಇಂದು 596 ಮಂದಿಗೆ ಕೊರೊನಾ ಪತ್ತೆ: 18,590 ಮಾದರಿಗಳ ಪರೀಕ್ಷೆ:ಕಾಸರಗೋಡಲ್ಲಿ 6. ಮಂದಿಗೆ ಸೋಂಕು


       ತಿರುವನಂತಪುರ: ರಾಜ್ಯದಲ್ಲಿ ಇಂದು 596 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ. ಎರ್ನಾಕುಳಂ 122, ತಿರುವನಂತಪುರ 75, ಕೋಝಿಕ್ಕೋಡ್ 55, ಕೊಟ್ಟಾಯಂ 51, ಇಡುಕ್ಕಿ 48, ತ್ರಿಶೂರ್ 41, ಕೊಲ್ಲಂ 39, ಆಲಪ್ಪುಳ 32, ಕಣ್ಣೂರು 32, ಪತ್ತನಂತಿಟ್ಟ 29, ಪಾಲಕ್ಕಾಡ್ 25, ಪಾಲಕ್ಕಾಡ್ 25, ಮಲಪ್ಪುರಂ 23, ವಯನಾಡ್ 19, ಕಾಸರಗಡು 5 ಎಂಬಂತೆ ಸೋಂಕು ಪತ್ತೆಯಾಗಿದೆ.
       ಕಳೆದ 24 ಗಂಟೆಗಳಲ್ಲಿ 18,590 ಮಾದರಿಗಳನ್ನು ಪರೀಕ್ಷಿಸಲಾಗಿದೆ.
        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 18,746 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ.  ಇವರಲ್ಲಿ 18,073 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 673 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ.  ಒಟ್ಟು 73 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಪ್ರಸ್ತುತ, 5812 ಕೊರೋನಾ ಪ್ರಕರಣಗಳಲ್ಲಿ, ಕೇವಲ 11.2 ಶೇಕಡಾ ಜನರುಬ ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
       ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾದ್ಇಸಿ ಯಾರೂ ಮೃತರಾಗಿಲ್ಲ. ಹಿಂದಿನ ದಿನಗಳಲ್ಲಿ ನಾಲ್ಕು ಸಾವುಗಳು ವರದಿಯಾಗಿದ್ದವು . ಜೊತೆಗೆ ದಾಖಲೆಗಳ ವಿಳಂಬದಿಂದ 20 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಮೇಲ್ಮನವಿಯಿಂದ 20 ಸಾವುಗಳು ಸಂಭವಿಸಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 67,339ಕ್ಕೆ ಏರಿಕೆಯಾಗಿದೆ.              ಇಂದು ದೃಢಪಟ್ಟ ಸೋಕಿತರಲ್ಲಿ  ರಾಜ್ಯದ ಹೊರಗಿನವರಿಲ್ಲ.  568 ಮಂದಿ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ.  25 ಮಂದಿಯ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ.  ಇಂದು ಮೂವರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಪತ್ತೆಯಾಗಿದೆ.
      ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 908 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 116, ಕೊಲ್ಲಂ 30, ಪತ್ತನಂತಿಟ್ಟ 63, ಆಲಪ್ಪುಳ 14, ಕೊಟ್ಟಾಯಂ 206, ಇಡುಕ್ಕಿ 84, ಎರ್ನಾಕುಲಂ 192, ತ್ರಿಶೂರ್ 53, ಪಾಲಕ್ಕಾಡ್ 20, ಮಲಪ್ಪುರಂ 23, ಕೋಝಿಕ್ಕೋಡ್ 52, ವಯನಾಡ್ 35, ಕಣ್ಣೂರು 14 ಮತ್ತು ಕಾಸರಗೋಡು 6 ಮಂದಿ ಎಂಬಂತೆ ಗುಣಮುಖರಾಗಿದ್ದಾರ.  ಇದರೊಂದಿಗೆ 5812 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 64,53,172 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries