HEALTH TIPS

ಏಪ್ರಿಲ್ 5 ರಿಂದ ಹೀರೋ ಬೈಕ್ ಗಳ ಬೆಲೆಯಲ್ಲಿ ಹೆಚ್ಚಳ!

             ಮುಂಬೈ: ಭಾರತದಲ್ಲಿ ಅತ್ಯಂತ ಶ್ರೇಷ್ಠ ಬೈಕ್ ಗಳನ್ನು ತಯಾರು ಮಾಡುತ್ತಿರುವ ಹೀರೋ ಮೋಟೋ ಕಾರ್ಪ್  ಏಪ್ರಿಲ್ 5 ರಿಂದ ತನ್ನ ಮೊಬೈಕ್ ಗಳ ಬೆಲೆಯನ್ನು ರೂ. 2000 ವರೆಗೆ ಹೆಚ್ಚಿಸಲು ನಿರ್ಧರಿಸಿದೆ.

              ಹೆಚ್ಚುತ್ತಿರುವ ಸರಕುಗಳ ಬೆಲೆ ಪರಿಣಾಮವನ್ನು ಸರಿದೂಗಿಸಲು ಬೆಲೆ ಪರಿಷ್ಕರಣೆ ಅಗತ್ಯವಾಗಿದೆ ಎಂದು ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹಿರೋ ಮೋಟೋಕಾರ್ಪ್ ಹೇಳಿಕೆಯಲ್ಲಿ ತಿಳಿಸಿದೆ.

              ಕಂಪನಿ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಯ ಎಕ್ಸ್ ಶೋ ರೂಂ ಬೆಲೆಗಳಲ್ಲಿ ಪರಿಷ್ಕರಣೆ ಮಾಡಲಿದೆ. ಬೆಲೆ ಪರಿಷ್ಕರಣೆ ರೂ. 2000 ವರೆಗೆ ಇರುತ್ತದೆ ಮತ್ತು ಹೆಚ್ಚಳದ ನಿಖರವಾದ ಪ್ರಮಾಣ ನಿರ್ದಿಷ್ಟ ಮಾದರಿಗಳು ಮತ್ತು ಮಾರುಕಟ್ಟೆಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ.

             ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ಆಡಿ, ಬಿಎಂಡಬ್ಲೂ ಮತ್ತು ಮರ್ಸಿಡಿಸ್ ಬೆಂಝ್ ಸೇರಿದಂತೆ ವಿವಿಧ ಕಂಪನಿಗಳು ಉತ್ಪಾದನ ವೆಚ್ಚದಲ್ಲಿನ ಏರಿಕೆಯಿಂದಾಗಿ ಮುಂದಿನ ತಿಂಗಳಿನಿಂದ ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಈಗಾಗಲೇ ಘೋಷಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries