HEALTH TIPS

ಈ ಹೆಲ್ತ್ ಟಿಪ್ಸ್‌ ಪಾಲಿಸಿದರೆ ಪರೀಕ್ಷೆಯಲ್ಲಿಒಳ್ಳೆಯ ಅಂಕ ಗಳಿಸಬಹುದು!

 ಈಗ ಪರೀಕ್ಷೆ ಸಮಯ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ, ಪಿಯುಸಿ, ಡಿಗ್ರಿ ಪರೀಕ್ಷೆ ಶುರುವಾಗಲಿದೆ. ಪರೀಕ್ಷೆ ಎಂದ ತಕ್ಷಣ ಮಕ್ಕಳಲ್ಲಿ ಒಂದು ರೀತಿಯ ಆತಂಕ, ಈಗ ಎಷ್ಟು ಮಾರ್ಕ್ಸ್‌ ತೆಗೆದರೂ ಕಮ್ಮಿಯೇ , ಅಷ್ಟೊಂದು ಸ್ಪರ್ಧೆ ಇದೆ. ಆದ್ದರಿಂದ ಹೆಚ್ಚು ಮಾರ್ಕ್ಸ್ ತೆಗೆಯಬೇಕೆಂದು ನಿದ್ದೆನೂ ಮಾಡದೆ, ಸರಿಯಾಗಿ ತಿನ್ನದೆ ಓದುತ್ತಾರೆ, ಆದರೆ ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುವುದು, ನಿದ್ದೆ-ಊಟ ಬಿಟ್ಟು ಓದಿದ್ದು ಆರೋಗ್ಯ ಸರಿಯಿಲ್ಲದ್ದರೆ ವ್ಯರ್ಥವಾಗುವುದು. ಏಕೆಂದರೆ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಪರೀಕ್ಷೆ ಮಾಡೋಕೆ ಆಗಲ್ಲ ಅಲ್ಲದೆ ಕಲಿತಿದ್ದು ಮರೆತು ಹೋಗುವ ಸಾಧ್ಯತೆ ಇದೆ, ಆದ್ದರಿಂದ ಪರೀಕ್ಷೆಯಲ್ಲಿ ಓದಿನಷ್ಟೇ ಆರೋಗ್ಯ ಕಡೆ ಗಮನ ನೀಡಬೇಕು.

ನಾವಿಲ್ಲಿ ಪರೀಕ್ಷೆ ಚೆನ್ನಾಗಿ ಮಾಡಲು ಆರೋಗ್ಯ ಟಿಪ್ಸ್ ನೀಡಿದ್ದೇವೆ, ಪರೀಕ್ಷೆ ಸಮಯದಲ್ಲಿ ಇದನ್ನು ಪಾಲಿಸಿ ಒಳ್ಳೆಯ ಸ್ಕೋರ್ ಮಾಡಿ:

1. ಆಹಾರವನ್ನು ಸ್ವಲ್ಪ-ಸ್ವಲ್ಪವಾಗಿ ಆಗಾಗ ತಿನ್ನಿ: ಹೊಟ್ಟೆ ತುಂಬಾ ತಿನ್ನಬೇಡಿ,ನಿದ್ದೆ ಬರುತ್ತೆ ಆದ್ದರಿಂದ ಆರೋಗ್ಯಕರ ಆಹಾರವನ್ನು ಸ್ವಲ್ಪ-ಸ್ವಲ್ಪ ತಿನ್ನಿ. ಇದರಿಂದ ದೇಹಕ್ಕೆ ಶಕ್ತಿ ದೊರೆಯುವುದು, ತುಂಬಾ ಹೊತ್ತು ಓದಬಹುದು. ಕೆಲ ಮಕ್ಕಳು ಓದುವಾಗ ಕುರುಕಲು ತಿನ್ನುತ್ತವೆ, ಅದು ಬೇಡ, ಎಣ್ಣೆ ಪದಾರ್ಥ, ಕುರುಕಲು ತಿಂಡಿ ಇವೆಲ್ಲಾ ಆರೋಗ್ಯ ಹಾಳು ಮಾಡಬೇಡಿ.

2. ಆರೋಗ್ಯಕರ ಬ್ರೇಕ್‌ಫಾಸ್ಟ್ ಸೇವಿಸಿ ಬೆಳಗ್ಗೆ ಆರೋಗ್ಯಕರ ಬ್ರೇಕ್‌ಪಾಸ್ಟ್ ಸೇವಿಸಿ. ಬೆಳಗ್ಗಿನ ತಿಂಡಿಯನ್ನು ಯಾವುದೇ ಕಾರಣಕ್ಕೆ ಸ್ಕಿಪ್‌ ಮಾಡಬೇಡಿ, ಏಕೆಂದರೆ ಬೆಳಗ್ಗೆ ತಿಂಡಿ ತಿನ್ನದಿದ್ದರೆ ನಿಶ್ಯಕ್ತಿ ಉಂಟಾಗಿ ಓದಲು ಅಥವಾ ಪರೀಕ್ಷೆ ಚೆನ್ನಾಗಿ ಬರೆಯಲು ಕಷ್ಟವಾಗಬಹುದು. ಆದ್ದರಿಂದ ಬೆಳಗ್ಗೆ ಆರೋಗ್ಯಕರ ಬ್ರೇಕ್‌ಪಾಸ್ಟ್ ಸೇವಿಸಲೇಬೇಕು.

3. ಸ್ನ್ಯಾಕ್ಸ್‌ಗೆ ಹಣ್ಣುಗಳು, ಡ್ರೈ ಫ್ರೂಟ್ಸ್ ಸೇವಿಸಿ ಮೊದಲೇ ಹೇಳಿದಂತೆ ಕುರುಕಲು ತಿಂಡಿಗಳನ್ನು ತಿನ್ನಬೇಡಿ, ಬದಲಿಗೆ ಡ್ರೈ ಫ್ರೂಟ್ಸ್ ಅಥವಾ ತಾಜಾ ಹಣ್ಣುಗಳು, ತಾಜಾ ಹಣ್ಣಿನ ಜ್ಯೂಸ್‌ಗಳನ್ನು ಸೇವಿಸಿ. ಯೋಗರ್ಟ್, ಲಸ್ಸಿ ಇವುಗಳನ್ನು ಸೇವಿಸಿ.

4. ಮಕ್ಕಳ ಆಹಾರದಲ್ಲಿ ಪ್ರೊಟೀನ್‌ ಮತ್ತು ಒಮೆಗಾ 3 ಕೊಬ್ಬಿನಂಶ ಇರಲಿ ಪೋಷಕರೇ ಮಕ್ಕಳಿಗೆ ನೀಡುವ ಆಹಾರದಲ್ಲಿ ಪ್ರೊಟೀನ್ ಹಾಗೂ ಒಮೆಗಾ 3 ಕೊಬ್ಬಿನಂಶವಿರಲಿ. ಇವುಗಳು ಮೆದುಳು ಚಟುವಟಿಕೆಯಿಂದ ಇರಲು ಸಹಕಾರಿ. ಹಾಲಿನ ಉತ್ಪನ್ನಗಳು, ನಟ್ಸ್, ಮೊಟ್ಟೆ, ಮೀನು ತಿನ್ನುವುದಾದರೆ ಕೊಡುವುದು ಒಳ್ಳೆಯದು.

5. ಸಾಕಷ್ಟು ನೀರು ಕುಡಿಯಬೇಕು ದಿನದಲ್ಲಿ ಕಡಿಮೆಯೆಂದರೂ 2 ಲೀಟರ್ ನೀರು ಕುಡಿಯಬೇಕು, ಬರೀ ನೀರು ಕುಡಿಯಲು ಇಷ್ಟವಿಲ್ಲದಿದ್ದರೆ ತಾಜಾ ಹಣ್ಣಿನ ಜ್ಯೂಸ್‌, ನಿಂಬು ಪಾನೀಯ ಕುಡಿಯಿರಿ.

6. ಬ್ರೇಕ್‌ ತೆಗೆದುಕೊಳ್ಳಿ ಓದುತ್ತಲೇ ಇರಬೇಡಿ, ಇದರಿಂದ ಒತ್ತಡಕ್ಕೆ ಒಳಗಾಗುತ್ತೀರಿ. ಓದಿ ಸುಸ್ತು ಅನಿಸಿದಾಗ ಬ್ರೇಕ್‌ ತೆಗೆಯಿರಿ. ಮಧ್ಯಾಹ್ನ ಸ್ವಲ್ಪ ಹೊತ್ತು ನಿದ್ದೆ ಇದರಿಂದ ಫ್ರೆಷ್‌ ಆಗುವಿರಿ.

7.ನಿಮ್ಮ ಓದಿಗೆ ಶೆಡ್ಯೂಲ್‌ ರೆಡಿ ಮಾಡಿ ಕಷ್ಟವಿರುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಜೊತೆಗೆ ದೈಹಿಕ ಚಟುವಟಿಕೆಗೆ ಗಮನ ನೀಡಿ, ಅಂದರೆ ಒಂದು ಕಡೆ ಕೂತೇ ಇರುವ ಬದಲು ಸ್ವಲ್ಪ ನಡೆದಾಡುತ್ತಾ ಓದಿ. ಸ್ವಲ್ಪ ವಾಕ್‌ ಹೋಗಿ ಬನ್ನಿ. ಮ್ಯೂಸಿಕ್ ಕೇಳಿ, ಇವೆಲ್ಲಾ ರಿಲ್ಯಾಕ್ಸ್‌ ಅನುಭವ ನೀಡುವುದು.

8. ಚೆನ್ನಾಗಿ ನಿದ್ದೆ ಮಾಡಿ ಪರೀಕ್ಷೆಗೆ ಓದುವುದು ಎಷ್ಟು ಮುಖ್ಯವೋ ನಿದ್ದೆ ಮಾಡುವುದು ಅಷ್ಟೇ ಮುಖ್ಯ. 8 ಗಂಟೆ ನಿದ್ದೆ ಮಾಡಿ. ನಿದ್ದೆ ಕಡಿಮೆಯಾದರ ಕಲಿತಿದ್ದು ಮರೆತು ಹೋಗುವ ಸಾಧ್ಯತೆ ಇದೆ, ಆದ್ದರಿಂದ ಚೆನ್ನಾಗಿ ನಿದ್ದೆ ಮಾಡಿ ಓದಿ ಆಗ ಚೆನ್ನಾಗಿ ನೆನಪಿನಲ್ಲಿರುತ್ತದೆ. ಆಲ್‌ ದಿ ಬೆಸ್ಟ್....





Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries