HEALTH TIPS

ಸತತ 8ನೇ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ: ಇಂದಿನ ದರ ಹೀಗಿದೆ...

    ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ(Petrol and Diesel price) ಕಳೆದೊಂದು ವಾರದಿಂದ ಸತತ ಏರಿಕೆಯಾಗುತ್ತಲೇ ಇದೆ. ಬುಧವಾರ ಸಹ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ ಗೆ 80 ಪೈಸೆ ಹೆಚ್ಚಳವಾಗಿದೆ.

    ಈ ಮೂಲಕ ಕಳೆದ 9 ದಿನಗಳಲ್ಲಿ 8 ಬಾರಿ ಇಂಧನ ಬೆಲೆ ಏರಿಕೆ ಕಂಡಿದೆ. ರಾಜಧಾನಿ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ 100.21 ರೂಪಾಯಿ, ಡೀಸೆಲ್ ಬೆಲೆ 91.47 ರೂಪಾಯಿಗೆ ತಲುಪಿದೆ. 

    ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 84 ಪೈಸೆ ಹೆಚ್ಚಳ ಮಾಡಲಾಗಿದ್ದು, ಡೀಸೆಲ್ ಬೆಲೆ 85 ಪೈಸೆ ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ  ಲೀಟರ್ ಪೆಟ್ರೋಲ್ 115.88 ರೂಪಾಯಿ ಹಾಗೂ ಡೀಸೆಲ್ 100.10 ರೂಪಾಯಿ ಆಗಿದೆ. 

    ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ರೂ 106.69 (76 ಪೈಸೆ ) ಮತ್ತು ಡೀಸೆಲ್ ಬೆಲೆ 96 ರೂ (75 ಪೈಸೆ ) ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ರೂ 110.52 (84 ಪೈಸೆ ಹೆಚ್ಚಳ) ಮತ್ತು ಡೀಸೆಲ್ ಬೆಲೆ 70 ಪೈಸೆ ಹೆಚ್ಚಳವಾಗಿ 95.42 ರೂಪಾಯಿಯಾಗಿದೆ. ಬೆಂಗಳೂರಿನಲ್ಲಿ ಇಂದು ಲೀಟರ್ ಇಂದು ಪೆಟ್ರೋಲ್ ಬೆಲೆ 105.62 ರೂಪಾಯಿಗಳಾಗಿದ್ದು, ಲೀಟರ್ ಡೀಸೆಲ್ ಬೆಲೆ 89.68 ರೂಪಾಯಿಗಳಾಗಿದೆ.

    ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನವೆಂಬರ್ 4 ರಿಂದ ಇಂಧನ ಬೆಲೆಗಳು ಸ್ಥಗಿತಗೊಂಡಿದ್ದವು. ಈ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು USD 30 ರಷ್ಟು ಏರಿಕೆಯಾಗಿದೆ. ಮಾರ್ಚ್ 10 ರಂದು ಮತ ಎಣಿಕೆಯ ನಂತರ ದರ ಪರಿಷ್ಕರಣೆ ನಿರೀಕ್ಷಿಸಲಾಗಿತ್ತು ಆದರೆ ಅದನ್ನು ಒಂದೆರಡು ವಾರಗಳವರೆಗೆ ಮುಂದೂಡಲಾಯಿತು.

     ಚೀನಾ ಮತ್ತು ರಷ್ಯಾ-ಉಕ್ರೇನ್ ಶಾಂತಿ ಮಾತುಕತೆ, ಕೋವಿಡ್ -19 ಪ್ರಕರಣಗಳ ಮಧ್ಯೆ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗುತ್ತಲೇ ಇದ್ದವು. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ $109.97 ರಂತೆ ಕಡಿಮೆ ವ್ಯಾಪಾರ ಮಾಡಿದ ನಂತರ ಪ್ರತಿ ಬ್ಯಾರೆಲ್‌ಗೆ $111.41 ಕ್ಕೆ $1.07 ಅಥವಾ 1% ರಷ್ಟು ಕಡಿಮೆಯಾಗಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ $ 103.46 ಕಡಿಮೆ ಇತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries