ಮುಳ್ಳೇರಿಯ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕೋಟೂರು ಸ್ಕಂದ ಪ್ಲಾಸಿಕ್ ಸಂಸ್ಥೆಗೆ ಭೇಟಿ ನೀಡಿದರು.
ಸಂಸ್ಥೆಯ ನೂತನ ಯಂತ್ರಕ್ಕೆ ತಮ್ಮ ದಿವ್ಯ ಹಸ್ತಗಳಿಂದ ಈ ಸಂದರ್ಭ ಚಾಲನೆಯನ್ನಿತ್ತರು. ಬಳಿಕ ಸಂಸ್ಥೆಯ ವತಿಯಿಂದ ತಯಾರಾಗುವ ಇತರ ಉತ್ಪನ್ನಗಳನ್ನು ದರ್ಶಿಸಿ ಸ್ವಉದ್ಯೋಗ ಮತ್ತು ಸ್ವಾವಲಂಬನೆಯ ವ್ಯವಸ್ಥೆಯನ್ನು ಹಾಗೂ ಕಾರ್ಯವಿಧಾನವನ್ನು ಶ್ಲಾಘಿಸಿದರು.
ಮುರಳಿಕೃಷ್ಣ ಸ್ಕಂದ ಸಂಸ್ಥೆಯ ಕಾರ್ಯಚಟುವಟಿಕೆಯ ಮಾಹಿತಿಗಳನ್ನು ಶ್ರೀಗಳವರಿಗೆ ವಿವರಿಸಿದರು.




