ಸಮರಸ ಚಿತ್ರಸುದ್ದಿ: ಬದಿಯಡ್ಕ: ಶ್ರೀ ಅಭಿನಂದನ್ ಎಂ. ಅವರ ನೇತೃತ್ವದಲ್ಲಿ ಕರುನಾಡು ಸೇವಾ ಟ್ರಸ್ಟ್ ಮಂಡ್ಯ ಇದರ ಆಶ್ರಯದಲ್ಲಿ ಮೈಸೂರು ರೋಟರಿ ಸಭಾಂಗಣದಲ್ಲಿ ನಡೆದ ಸಾಧಕರಿಗೆ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ನೆಲ್ಲಿಕಟ್ಟೆಯ ಪ್ರಕೃತಿ ಆಯುರ್ವೇದ ಆಸ್ಪತ್ರೆ ವೈದ್ಯೆ ಡಾ.ವಾಣಿಶ್ರೀ ಕಾಸರಗೋಡು ಅವರನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರುನಾಡು ವಿಭೂಷಣ ಗೌರವ ಪ್ರಶಸ್ತಿ 2022 ನೀಡಿ ಗೌರವಿಸಲಾಯಿತು.




