ಬದಿಯಡ್ಕ: ಸಿ.ಒ.ಡಿ.ಪಿ. ಸಂಸ್ಥೆ ಮಂಗಳೂರು ಪ್ರವರ್ತಿತ ಸ್ವಸಹಾಯ ಸಂಘಗಳ ಹಾಗೂ ಯುವತಾರ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್ ಉಬ್ರಂಗಳ ಇದರ ಜಂಟಿ ಆಶ್ರಯದಲ್ಲಿ ಉಬ್ರಂಗಳ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಕಾರ್ಯಕ್ರಮವನ್ನು ಸಿ.ಒ.ಡಿ.ಪಿ. ಸಂಸ್ಥೆಯ ಸಂಯೋಜಕ ರವಿಕುಮಾರ್ ಕ್ರಾಸ್ತ ಉದ್ಘಾಟಿಸಿ ಪ್ರಸ್ತುತ ದೇಶ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮಾಲಿನ್ಯ ಒಂದು ಪ್ರಮುಖ ಸಮಸ್ಯೆಯಾಗಿದೆ. ಪರಿಸರ ಸ್ವಚ್ಛತೆ ಇಲ್ಲದಿದ್ದರೆ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗ್ರತರಾಗಬೇಕು ಎಂದು ಕರೆನೀಡಿದರು.
ಅಂಬಿಕಾ ಸ್ವಾಗತಿಸಿ, ರವೀಂದ್ರ ವಂದಿಸಿದರು. ಸಂಸ್ಥೆಯ ಕಾರ್ಯಕರ್ತೆ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಸ್ವಚ್ಛತಾ ಅಭಿಯಾನಕ್ಕೆ ಅಕ್ಷಯ್ ಕುಮಾರ್, ಸುರೇಶ, ಮಣಿಕಂಠ, ಜೆಸಿಂತಾ, ಅಜಿತಾ ಮೊದಲಾದವರು ನೇತೃತ್ವ ನೀಡಿದರು.




