HEALTH TIPS

ಈ ಜಿಹಾದಿಯನ್ನು ಬಿಜೆಪಿ ಏಕೆ ಪ್ರೀತಿಸಬೇಕೆಂದು ತಿಳಿಯುತ್ತಿಲ್ಲ: ತಸ್ಲಿಮಾ

               ಬೆಂಗಳೂರು: 'ಕೆಲವರು ಒವೈಸಿಯನ್ನು ಬಿಜೆಪಿ ಪ್ರೀತಿಸುತ್ತದೆ ಎನ್ನುತ್ತಾರೆ. ಒವೈಸಿಗೆ ಭಾರತ ರತ್ನ ಸಿಗುತ್ತದೆ ಎನ್ನುತ್ತಾರೆ. ಇವರು ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ. ಈ ಜಿಹಾದಿಯನ್ನು ಬಿಜೆಪಿ ಏಕೆ ಪ್ರೀತಿಸಬೇಕೆಂದು ತಿಳಿಯುತ್ತಿಲ್ಲ' ಎಂದು ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲಿಮಾ ನಸ್ರೀನ್‌ ಟ್ವೀಟ್‌ ಮಾಡಿದ್ದಾರೆ.


              ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಗಳಿಸಲು ಕೊಡುಗೆ ನೀಡಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರಿಗೆ ಪದ್ಮ ವಿಭೂಷಣ ಮತ್ತು ಭಾರತ ರತ್ನ ಕೊಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಅವರು ಕಳೆದ ವಾರ ಟೀಕಿಸಿದ್ದರು.

              ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಷ್ಟೇ ಗೆಲ್ಲಲು ಸಫಲವಾಗಿರುವ ಬಿಎಸ್‌ಪಿ ಹಾಗೂ ಖಾತೆ ತೆರೆಯಲು ವಿಫಲಗೊಂಡ ಎಐಎಂಐಎಂ ಪಕ್ಷಗಳು ಸಮಾಜವಾದಿ ಪಕ್ಷಕ್ಕೆ(ಎಸ್‌ಪಿ) ತೀವ್ರ ಪೆಟ್ಟು ನೀಡುವಲ್ಲಿ ಸಫಲವಾದವು. ಇದರಿಂದ ಬಿಜೆಪಿಗೆ ಲಾಭವಾಯಿತು ಎಂದು ವಿಶ್ಲೇಷಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries