ಕಾಸರಗೋಡು: ಐದು ದಿವಸಗಳ ಕಾಲ ನಡೆಯಲಿರುವ ಕಣ್ಣೂರು ವಿಶ್ವ ವಿದ್ಯಾಲಯ ವ್ಯಾಪ್ತಿಯ ಕಾಲೇಜು ಕಲೋತ್ಸವ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಮಾ. 23ರಂದು ಆರಂಭಗೊಳ್ಳಲಿದೆ. ಕಾರ್ಯಕ್ರಮದ ಪ್ರಚಾರಾರ್ಥ ಡಂಗುರ ಮೆರವಣಿಗೆ ಜರುಗಿತು. ಒಪ್ಪನ, ಕೋಲ್ಕಳಿ, ಮುತ್ತುಕೊಡೆ, ಸಿಂಗಾರಿಮೇಳ ಮೆರವಣಿಗೆಗೆ ಮೆರಗು ನೀಡಿತ್ತು.
ಕಾಸರಗೋಡು ಸರ್ಕಾರಿ ಕಾಲೇಜು ವಠಾರದಿಂದ ಆರಂಭಗೊಂಡ ಮೆರವಣಿಗೆ ಹಳೇ ಬಸ್ ನಿಲ್ದಾಣ ಮೂಲಕ ಸಾಗಿ ಹೊಸ ಬಸ್‍ನಿಲ್ದಾಣ ವಠಾರದಲ್ಲಿ ಸಮಾರೋಪಗೊಂಡಿತು. ಕಲೋತ್ಸವದ ಅತಿಥೇಯರಾದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ಆಯೋಜಿಸಿದ್ದರು.
ಸಾಹಿತ್ಯೋತ್ಸವ, ಚಿತ್ರೋತ್ಸವ, ನಾಟಕೋತ್ಸವ, ನೃತ್ಯ, ಸಂಗೀತದ ಮೂಲಕ ಐದು ದಿವಸಗಳ ಕಾಲ ಕಾಸರಗೋಡು ಸರ್ಕಾರಿ ಕಾಲೇಜು ರಂಗೇರಲಿದೆ. ಮ. 23ರಂದು ಕತೆಗಾರ, ಪತ್ರಕರ್ತಪ್ರಮೋದ್‍ರಾಜನ್ ವೇದಿಕೇತರ ಕಾರ್ಯಕ್ರಮ ಉದ್ಘಾಟಿಸುವರು. ಚಿತ್ರನಟ ಉಣ್ಣಿರಾಜ್ ಚೆರ್ವತ್ತೂರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಾ 23ರಿಂದ 27ರ ವರೆಗೆ ವಿಶ್ವ ವಿದ್ಯಾಲಯ ಕಲೋತ್ಸವ ನಡೆಯಲಿದೆ.


