ಕಾಸರಗೋಡು: ಅಭಿವೃದ್ಧೀ ಹೆಸರಲ್ಲಿ ಜನಸಾಮಾನ್ಯರನ್ನು ಬೀದಿಗೆ ತಳ್ಳಲು ಕಾರಣವಾಗಲಿರುವ ಕೆ-ರೈಲ್ ಸಿಲ್ವರ್ ಲೈನ್ ಯೋಜನೆ ವಿರುದ್ಧ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಾ. 25 ಹಾಗೂ 26ರಂದು ಪಾದಯಾತ್ರೆ ನಡೆಯಲಿರುವುದು.
ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ಪಾದಯಾತ್ರೆ ಆಯೋಜಿಸಲಾಗಿದೆ. 25ರಂದು ನೀಲೇಶ್ವರದಿಂದ ಆರಂಭಗೊಳ್ಳುವ ಪಾದಯಾಥ್ರೆ ಕಾಞಂಗಾಡಿನಲ್ಲಿ ಸಮಾರೋಪಗೊಳ್ಳಿದೆ. 26ರಂದು ಪಾಲಕುನ್ನುವಿನಿಂದ ಆರಂಭಗೊಂಡು, ಕಾಸರಗೋಡಿನಲ್ಲಿ ಸಮಾರೋಪಗೊಳ್ಳುವುದು ಎಂದು ಪ್ರಕಟಣೆ ತಿಳಿಸಿದೆ.

