HEALTH TIPS

ಪೇರಾಲ್ ಕಣ್ಣೂರಿನ ಶಿವಾನಂದರಿಗೆ ಅತ್ಯುತ್ತಮ ಕೃಷಿಕ ಪ್ರಶಸ್ತಿ

                 ಕುಂಬಳೆ: ಬಾರಿಯ ರಾಜ್ಯ ಸರ್ಕಾರದ ಅತ್ಯುತ್ತಮ ಕೃಷಿಕ ಪ್ರಶಸ್ತಿಗೆ ಪುತ್ತಿಗೆ ಗ್ರಾ.ಪಂ. ಪೇರಾಲ್ ಕಣ್ಣೂರು ನಿವಾಸಿ ಶಿವಾನಂದರಿಗೆ ಲಭಿಸಿದೆ. ಕಳೆದ ನಾಲ್ಕು ದಶಕಗಳಿಂದ ಕೃಷಿಯಲ್ಲಿ ಸಂಪೂರ್ಣ ಅನುಭವಗಳನ್ನು ಧಾರೆಯೆರೆದು ತಮ್ಮ 12 ಎಕ್ರೆ ಕೃಷಿಯೋಗ್ಯ ಭೂಮಿಯಲ್ಲಿ ಭತ್ತ, ತರಕಾರಿ, ಬಾಳೆ, ತೆಂಗು, ಅಡಿಕೆ ಸಹಿತ ವಿವಿಧ ಕೃಷಿ ಚಟುವಟಿಕೆಗಳಲ್ಲಿ ಸಿಲುಕಿಕೊಂಡಿದ್ದಾರೆ.  ಐದು ಎಕ್ರೆಗಳಷ್ಟು ಸತ ಭೂಮಿ ಹೊಂದಿರುವ ಇವರು 7 ಎಕ್ರೆ ಸ್ಥಳವನ್ನು ಗೇಣಿಗೆ ಪಡೆದು ವೈವಿಧ್ಯ ಕೃಷಿ ಬೆಳೆಗಳನ್ನು ಬೆಳೆಸುತ್ತಿದ್ದಾರೆ. 13ರ ಹರೆಯದಲ್ಲಿ ಕೃಷಿಯತ್ತ ಆಕರ್ಷಿರಾದ ಇವರು 19ನೇ ವಯಸ್ಸಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕೃಷಿ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಣಡರು. 


                           ಹತ್ತನೇ ತರಗತಿವರೆಗೆ ವಿದ್ಯಾರ್ಜನೆ ಮಾಡಿದ ಬಳಿಕ ಕೃಷಿ ಭೂಮಿಗೆ ಇಳಿದು ದುಡಿಮೆಯಲ್ಲಿ ತೊಡಗಿಸಿಕೊಂಡವರು. ಇವರು ಅತಿಯಾಗಿ ಪ್ರೀತಿಸುವ ಕೃಷಿ ಕೆಲಸ ಇವರ ತಂದೆ ಅರಸ ಪೂಜಾರಿಯಿಂದ ರಕ್ತಗತವಾಗಿ ಬಂದದ್ದಾಗಿದೆ. ತನ್ನ ಪೂರ್ಣ ಸಮಯವನ್ನು ಕೃಷಿ ಕೆಲಸಕ್ಕೆ ವಿನಿಯೋಗಿಸುತ್ತಿದ್ದಾರೆ. ಇವರಿಗೆ ಪತ್ನಿ ಮತ್ತು ಮಕ್ಕಳು ಕೆಲಸದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಜೇನು ಸಾಕಾಣೆ, ಹೈನುಗಾರಿಕೆ ಸಹಿತ ಆಧುನಿಕ ಕೃಷಿ ಗಿಡಗಳನ್ನೂ ನೆಟ್ಟು ಬೆಳೆಸಿ ಆದಾಯ ಗಳಿಸುತ್ತಿದ್ದಾರೆ. 

    ಇವರ ನಿರಂತರ ಕೃಷಿ ಆಸಕ್ತಿ, ಸ್ವಾವಲಂಬಿ ಜೀವನೋಪಾಯ ಜಕ್ರಮಗಳನ್ನು ಗುರುತಿಸಿ ರಾಜ್ಯದ ಅತ್ಯುತ್ತಮ ಕೃಷಿಕರಿಗಿರುವ ಸಿಬಿ ಕಲ್ಲಿಂಗಾಲ್ ಸ್ಮಾರಕ ಕೃಷಿಕೋತ್ತಮ ಪ್ರ|ಶಸ್ತಿ ಇದೀಗ ಇವರ ಪಾಲಿಗೆ ಒದಗಿಬಂದಿದೆ. 2 ಲಕ್ಷ ರೂ.ನಗದು, ಚಿನ್ನದ ಪದಕ, ಫಲಕ ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.


                   ರಾಜ್ಯದ ಅತ್ಯುತ್ತಮ ಕೃಷಿಕರಿಗಿರುವ ಪ್ರಶಸ್ತಿಗೆ ಆಯ್ಕೆಗೊಂಡ ಶಿವಾನಂದರನ್ನು ಪುತ್ತಿಗೆ ಪಂ. ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉಪಾಧ್ಯಕ್ಷೆ ಜಯಂತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಾಲಾಕ್ಷ ರೈ, ಸದಸ್ಯ ಜನಾರ್ದನ, ಕೃಷಿ ಅಧಿಕಾರಿ ನಸೀಸತ್ ಹಂಸೀನ ಮೊದಲಾದವರು ಶಿವಾನಂದರ ಮನೆಗೆ ಭೇಟಿ ನೀಡಿ ಶಾಲು ಹೊದಿಸಿ, ಹಣ್ಣು-ಹಂಪಲು ನೀಡಿ ಗೌರವಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries