HEALTH TIPS

ಬೇಸಿಗೆಯಲ್ಲಿ ಫಿಟ್ ಅಂಡ್‌ ಫೈನ್‌ ಆಗಿರಲು ಈ ಡಿಟಾಕ್ಸ್ ಪಾನೀಯಗಳು ಒಳ್ಳೆಯದು

 ಮೊದಲಿಗೆ ಡಿಟಾಕ್ಸ್ ವಾಟರ್‌ ಯಾವುವು, ಅದನ್ನು ಹೇಗೆ ತಯಾರಿಸಬೇಕು ಎಂದು ತಿಳಿಯುವ ಮುನ್ನ ಬಾಡಿ ಡಿಟಾಕ್ಸ್ ಎಂದರೇನು ನೋಡೋಣ:

ನಮ್ಮ ದೇಹದಲ್ಲಿ ಅನಾರೋಗ್ಯಕರ ಆಹಾರಕ್ರಮ, ಮಾನಸಿಕ ಒತ್ತಡ, ಪರಿಸರ ಮಾಲಿನ್ಯ, ಸೋಂಕು ಹಾಗೂ ಕೆಟ್ಟ ಚಟಗಳಿದ್ದರೆ ಅದರಿಂದ ನಮ್ಮ ದೇಹದಲ್ಲಿ ಕಶ್ಮಲ ಹೆಚ್ಚಾಗುವುದು, ದೇಹದಲ್ಲಿ ಕಶ್ಮಲ ಹೆಚ್ಚಾದರೆ ಅನಾರೋಗ್ಯ ಹೆಚ್ಚುವುದು. ಈ ಕಶ್ಮಲವನ್ನು ದೇಹದಿಂದ ಹೊರ ಹಾಕುವ ಪ್ರಕ್ರಿಯೆಗೆ ಬಾಡಿ ಡಿಟಾಕ್ಸ್ ಎಂದು ಕರೆಯಲಾಗುವುದು.

ಬಾಡಿ ಡಿಟಾಕ್ಸ್ ಮಾಡಿದ ಮೇಲೆ ನಿಮಗೆ ಒಂಥರಾ ರಿಫ್ರೆಷ್‌ ಆದಂತೆ ಅನಿಸುವುದು. ಬಾಡಿ ಡಿಟಾಕ್ಸ್ ಮಾಡಿ ಅದರ ಜೊತೆಗೆ ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ನಿಮಗೆ ನಿಮ್ಮ ದೇಹದಲ್ಲಾದ ಆರೋಗ್ಯಕರ ಬದಲಾವಣೆ ಗಮನಕ್ಕೆ ಬರುತ್ತದೆ.

ಬಾಡಿಯನ್ನು ಡಿಟಾಕ್ಸ್ ಮಾಡುವುರಿಂದ ಮಾನಸಿಕ ಸ್ವಾಸ್ಥ್ಯ ಚೆನ್ನಾಗಿರುತ್ತೆ, ಜೀರ್ಣಕ್ರಿಯೆ ಚೆನ್ನಾಗಿರುತ್ತದೆ. ನೋವು-ಉರಿಯೂತದ ಸಮಸ್ಯೆ ಕಡಿಮೆಯಾಗುವುದು, ಹಾರ್ಮೋನ್ಗಳನ್ನು ಸಮತೋಲನದಲ್ಲಿಡುತ್ತದೆ, ಮುಖದಲ್ಲಿ ಮೊಡವೆ, ಕಲೆ ಮುಂತಾದ ಸಮಸ್ಯೆ ದೂರಾಗುವುದು, ದೇಹ ಉಲ್ಲಾಸದಿಂದ ಕೂಡಿರುತ್ತದೆ.

ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಡಿಟಾಕ್ಸ್ ಮಾಡುವುದು ಒಳ್ಳೆಯದು:

* ತ್ವಚೆಗೆ ಸಂಬಂಧಿಸಿದ ಸಮಸ್ಯೆ ಅಂದರೆ ತುಂಬಾ ಮೊಡವೆ ಏಳುವುದು, ತ್ವಚೆಯಲ್ಲಿ ತುರಿಕೆ, ಸಣ್ಣ-ಸಣ್ಣ ಗುಳ್ಳೆಗಳು ಏಳುವುದು ಇವೆಲ್ಲಾ ಕಂಡು ಬಂದರೆ ನೀವು ದೇಹದ ಒಳಗಡೆ ಇರುವ ಕಶ್ಮಲಗಳನ್ನು ಹೊರ ಹಾಕಿದರೆ ಇವೆಲ್ಲಾ ಕಡಿಮೆಯಾಗುವುದು.

* ಆಗಾಗ ಅಜೀರ್ಣ ಸಮಸ್ಯೆ ಉಂಟಾಗುತ್ತಿದ್ದರೆ ದೇಹವನ್ನು ಕ್ಲೆನ್ಸ್ ಮಾಡಿ.

* ಯಾವಾಗಲೂ ಒಂದು ರೀತಿಯ ನಿರುತ್ಸಾಹ, ತಲೆ ಸಿಡಿಯುವ ಅನುಭವ, ಕೆಟ್ಟ ಆಲೋಚನೆಗಳು ಈ ರೀತಿ ಇದ್ದರೆ ಬಾಡಿ ಡಿಟಾಕ್ಸ್ ಮಾಡಿದರೆ ನಿಮ್ಮಲ್ಲಿ ಉತ್ಸಾಹದಿಂದಿರುವಿರಿ ಹಾಗೂ ಕೆಟ್ಟ ಆಲೋಚನೆಗಳು ದೂರಾಗುವುದು, ತಲೆನೋವು ಕಡಿಮೆಯತಾಗುವುದು, ಖುಷಿ-ಖುಷಿಯಾಗಿ ಇರುವಿರಿ.

* ನಿಮಗೆ ಕೆಲವೊಂದು ಆಹಾರಗಳು ಅಲರ್ಜಿಯನ್ನು ಉಂಟು ಮಾಡುವುದಾರೆ ಬಾಡಿ ಡಿಟಾಕ್ಸ್ ಮಾಡಿ.

* ತುಂಬಾ ಸಿಹಿ ಪದಾರ್ಥಗಳು ಅಥವಾ ಕರಿದ ಪದಾರ್ಥಗಳು, ಮದುವೆ, ಹಬ್ಬ ಅಡುಗೆಗಳನ್ನು ಸವಿದ ಬಳಿಕ ಡಿಟಾಕ್ಸ್ ಪಾನೀಯ ಕುಡಿದು ದೇಹವನ್ನು ಡಿಟಾಕ್ಸ್ ಮಾಡಿಕೊಂಡರೆ ಮೈಯಲ್ಲಿ ಕೊಬ್ಬು, ಸಕ್ಕರೆಯಂಶ ಯಾವುದೂ ಹೆಚ್ಚುವುದಿಲ್ಲ, ಆರೋಗ್ಯ ಚೆನ್ನಾಗಿರುತ್ತದೆ.

ಡಿಟಾಕ್ಸ್ ಪಾನೀಯಗಳು ಯಾವುವು, ಅದನ್ನು ತಯಾರಿಸುವುದು ಹೇಗೆ ಎಂದು ನೋಡೋಣ ಬನ್ನಿ:

ಮೊದಲಿಗೆ ಡಿಟಾಕ್ಸ್ ಪಾನೀಯ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಡಿಟಾಕ್ಸ್‌ ಪಾನೀಯ ಮಾಡುವುದೇನೂ ರಾಕೆಟ್‌ ಸೈನ್ಸ್ ಅಲ್ಲ. ನೀವು 1 ಅಥವಾ ಎರಡು ಲೀಟರ್ ನೀರಿಗೆ ಡಿಟಾಕ್ಸ್ ಮಾಡುವ ಆಹಾರ ವಸ್ತುಗಳನ್ನು ಹಾಕಿ ಆ ನೀರನ್ನು ಕುಡಿಯುವುದಾಗಿದೆ.

ಕಿತ್ತಳೆ ಹಾಗೂ ಪುದೀನಾ ಡಿಟಾಕ್ಸ್ ಪಾನೀಯ ನೀವು ನೀರಿಗೆ ತಾಜಾ ಕಿತ್ತಳೆ ರಸ ಹಿಂಡಿ, ಎರಡು ಎಸಳು ಪುದೀನಾ ಹಾಕಿಟ್ಟು ಬಾಯಾರಿಕೆಯಾದಾಗ ಆ ನೀರನ್ನು ಕುಡಿಯುವುದು.

ನಿಂಬೆ ಹಣ್ಣು, ಸೌತೆಕಾಯಿ, ಪುದೀನಾ ಒಂದು ಲೀಟರ್ ನೀರಿಗೆ ಸೌತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ, ಅದಕ್ಕೆ ಒಂದು ತುಂಡು ನಿಂಬೆ ಹಣ್ಣು ಕತ್ತರಿಸಿ ಹಾ 2 ಎಸಳು ಪದೀನಾ ಎಲೆ ಹಾಕಿ, ಆ ನೀರನ್ನು ಕುಡಿಯಿರಿ. ಇದರಿಂದ ನಿಮಗೆ ತುಂಬಾ ರಿಫ್ರೆಶ್ ಅನಿಸುವುದು.

ಕಲ್ಲಂಗಡಿ ಹಣ್ಣು ಹಾಗೂ ಸಿಟ್ರಸ್ ಪಾನೀಯ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತುಂಬಾನೇ ದೊರೆಯುತ್ತದೆ. ಕಲ್ಲಂಗಡಿ ಹಣ್ಣಿಗೆ ಸ್ವಲ್ಪ ಶುಂಠಿ ಹಾಕಿ ಜ್ಯೂಸ್ ಮಾಡಿ ಅದಕ್ಕೆ ನಿಂಬೆರಸ ಹಿಂಡಿ ಕುಡಿಯಿರಿ. ಆದರೆ ಈ ಜ್ಯೂಸ್‌ಗೆ ಸಕ್ಕರೆ ಸೇರಿಸಬೇಡಿ.

ಸ್ಟ್ರಾಬೆರ್ರಿ, ಸೌತೆಕಾಯಿ 1 ಕಪ್‌ ಸ್ಟ್ರಾಬೆರ್ರಿ ತೆಗೆದುಕೊಂಡು , 1 ಒರೆಗ್ನೋ, 1 ಕಪ್ ಸೌತೆಕಾಯಿ ಸೇರಿಸಿ ಜ್ಯೂಸ್ ಮಾಡಿ ಕುಡಿಯಿರಿ. ಬೇಸಿಗೆಯಲ್ಲಿ ತಣ್ಣನೆಯ ಪಾನೀಯ ಕುಡಿಯಬೇಕೆಂದು ಅನಿಸುವುದು, ಇದನ್ನು ಫ್ರಿಡ್ಜ್‌ನಲ್ಲಿಟ್ಟು ಸೇವಿಸಬಹುದು.

ಪೈನಾಪಲ್‌, ಬಿಳಿ ದಾಸವಾಳ ಐಸ್‌ ಟೀ,ಶುಂಠಿ ಬಳಸಿ ಮಾಡುವ ಡಿಟಾಕ್ಸ್ ಪಾನೀಯ * 4-5 ದಾಸವಾಳ ಹೂ ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಸೋಸಿಡಿ. *ಈಗ ಪೈನಾಪಲ್‌, ಶುಂಠಿ, ಐಸ್‌ ಕ್ಯೂಬ್ಸ್ ಹಾಕಿ ಜ್ಯೂಸ್ ಮಾಡಿ ಕುಡಿಯಿರಿ. ನೀವು ಇದಕ್ಕೆ ಲೆಮನ್‌ಗ್ರಾಸ್ ಕೂಡ ಸೇರಿಸಬಹುದು.





Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries