ಮಧೂರು: ಕೇರಳ ಸರ್ಕಾರದ ಶುಚಿತ್ವ ರ್ಯಾಂಕ್‍ನಲ್ಲಿ ಪ್ರಥಮ ಸ್ಥಾನ ಪಡೆದ ಮಧೂರು ಗ್ರಾಮ ಪಂಚಾಯತಿ ಹಸಿರು ಕ್ರಿಯಾ ಸೇನೆ ಸದಸ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ ಉದ್ಘಾಟಿಸಿದರು.
ಉಪಾಧ್ಯಕ್ಷೆ ಸ್ಮಿಜಾ ವಿನೋದ್ ಅಧ್ಯಕ್ಷತೆ ವಹಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಸೂರ್ಲು, ಉಮೇಶ್ ಗಟ್ಟಿ, ಯಶೋದಾ, ಪಂಚಾಯತಿ ಸದಸ್ಯರು, ಮಾಜಿ ಪಂಚಾಯತಿ ಅಧ್ಯಕ್ಷರಾದ ವಿಠಲ ಶೆಟ್ಟಿ, ಮಾಲತಿ ಸುರೇಶ್, ಪಂಚಾಯತಿ ಕಾರ್ಯದರ್ಶಿ ಗೀತಾ ಕುಮಾರಿ, ಜೂನಿಯರ್ ಸುಪರಿಂಟೆಂಡೆಂಟ್ ಪಿ.ಪಿತಾಂಬರನ್, ಅಸಿಸ್ಟೆಂಟ್ ಸೆಕ್ರೆಟರಿ ತೋಮಸ್, ಹಸಿರು ಕ್ರಿಯಾ ಸೇನೆ ಸದಸ್ಯರು, ಜಯ ರಾಣಿ ಮೊದಲಾದವರು ಉಪಸ್ಥಿತರಿದ್ದರು. ವಿ.ಇ.ಒ. ಪಿತಾಂಬರನ್ ಸ್ವಾಗತಿಸಿದರು.




