ಕಾಸರಗೋಡು: ಕಾರವಾನ್ ಪ್ರವಾಸೋದ್ಯಮ ಅಲ್ಪಾವಧಿಯಲ್ಲಿಯೇ ಉತ್ತಮ ಯಶಸ್ಸು ಸಾಧಿಸಲು ಸಾಧ್ಯವಾಗಲಿದೆ ಎಂದು ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಪಿ.ಎ.ಮಹಮ್ಮದ್ ರಿಯಾಜ್ ಹೇಳಿದರು.
ಬೇಕಲ್ ಕ್ಲಬ್‍ನಲ್ಲಿ ಬೇಕಲ್ ರೆಸಾಟ್ರ್ಸ್ ಡೆವಲಪ್‍ಮೆಂಟ್ ಕಾಪೆರ್Çರೇಷನ್ ಲಿಮಿಟೆಡ್‍ನ(ಬಿ.ಆರ್.ಡಿ.ಸಿ) ವರ್ಷದ ಅವಧಿಯ ನಾರ್ದರ್ನ್ ಲೈಟ್ಸ್ ಬೇಕಲ್ ಟೂರಿಸಂ ಮಿಷನ್ 2022 ಅಭಿಯಾನವನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು.
ಯೋಜನೆಯ ಅಂಗವಾಗಿ ಮಲಬಾರ್‍ನ ಮೊದಲ ಪ್ರವಾಸೋದ್ಯಮ ಕಾರವಾನ್‍ಗೆ ಸಚಿವರು ಚಾಲನೆ ನೀಡಿದರು.
ಮಲಬಾರ್‍ನ ಪ್ರವಾಸೋದ್ಯಮ ಸಾಮಥ್ರ್ಯವನ್ನು ವಿಶ್ವ ಪ್ರವಾಸೋದ್ಯಮ ನಕ್ಷೆಗೆ ತರುವುದು ರಾಜ್ಯ ಸರ್ಕಾರದ ಲಕ್ಷ್ಯವಾಗಿದೆ. ಇದಕ್ಕೆ ಕಾರವಾನ್ ಪ್ರವಾಸೋದ್ಯಮದಂತಹ ಸಾಧ್ಯತೆಗಳು ನೆರವಾಗಲಿವೆ ಎಂದರು. ಸಾಮಾನ್ಯ ಜನರು ಪ್ರಯಾಣಿಸಬಹುದಾದ ಕಾರವಾನ್ ಅನ್ನು ಆರಾಮವಾಗಿ ಬಳಸಬಹುದು. ಕಾರವಾನ್ ಪ್ರವಾಸೋದ್ಯಮ ನೀತಿಯು ಉತ್ತಮವಾಗಿ ಬೆಂಬಲಿತವಾಗಿದೆ ಮತ್ತು ಸ್ವೀಕರಿಸಲ್ಪಟ್ಟಿದೆ. ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ 330 ಕಾರವಾನ್ ನೋಂದಣಿಯಾಗಿದೆ ಎಂದರು. ಪ್ರವಾಸೋದ್ಯಮ ನಕ್ಷೆಯಲ್ಲಿ ಕಾಸರಗೋಡು ಪ್ರಮುಖ ಜಿಲ್ಲೆಯಾಗಿದೆ. ಈ ಪ್ರದೇಶವು ದೇಶೀಯ ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ಬಿಆರ್‍ಡಿಸಿಯು ನಾರ್ದರ್ನ್ ಲೈಟ್ಸ್ ಬೇಕಲ್ ಟೂರಿಸಂ ಮಿಷನ್ 2022 ಅಭಿಯಾನವನ್ನು ಕೈಗೆತ್ತಿಕೊಳ್ಳುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ಸಾಧ್ಯತೆಗಳು ಹೆಚ್ಚಾಗುತ್ತವೆ ಮತ್ತು ಐದು ವರ್ಷಗಳು ಕಾಸರಗೋಡು ಪ್ರವಾಸೋದ್ಯಮಕ್ಕೆ ಜಾಗೃತಿಯ ಸಮಯವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾರವಾನ್ ಪ್ರವಾಸೋದ್ಯಮ ಯೋಜನೆಯನ್ನು ಪ್ರಾರಂಭಿಸುವುದು ಕೋವಿಡ್ ವಿಸ್ತರಣೆಯ ನಂತರ ಬಿಕ್ಕಟ್ಟಿನಲ್ಲಿರುವ ಪ್ರವಾಸೋದ್ಯಮ ಇಲಾಖೆಯನ್ನು ಉತ್ತೇಜಿಸುವ ಒಂದು ಭಾಗವಾಗಿದೆ. ಸುರಕ್ಷಿತ ಪ್ರಯಾಣ, ಸುರಕ್ಷಿತ ಜೀವನ ಮತ್ತು ಕುಟುಂಬದೊಂದಿಗೆ ವಾಸಿಸುವುದು ಗುರಿಯಾಗಿದೆ ಎಂದರು.
ಶಾಸಕ ಇ ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಬಿಆರ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಪಿ. ಶಿಜಿನ್ ಸ್ವಾಗತಿಸಿ, ವ್ಯವಸ್ಥಾಪಕ ಯು.ಎಸ್.ಪ್ರಸಾದ್ ವಂದಿಸಿದರು.




