HEALTH TIPS

ವಿಶ್ವ ಕ್ಷಯರೋಗ ದಿನ: ಟಿಬಿಯಿಂದ ಗುಣಮುಖರಾದವರಲ್ಲಿ ಮತ್ತೆ ಆ ಕಾಯಿಲೆ ಮರುಕಳಿಸುವುದೇ?

 ಮಾರ್ಚ್‌ 24ರಂದು ವಿಶ್ವ ಕ್ಷಯರೋಗ ದಿನ ಆಚರಿಸಲಾಗುವುದು. ಕ್ಷಯರೋಗವನ್ನು ಸಂಪೂರ್ಣ ನಾಶ ಮಾಡಲು ಹಾಗೂ ಜನರಿಗೆ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಕ್ಷಯರೋಗ ಅಥವಾ ಟಿಬಿ ಕಾಯಿಲೆ ಶ್ವಾಸಕೋಶಕ್ಕೆ ತಗುಲುವ ಕಾಯಿಲೆಯಾಗಿದ್ದು ಟಿಬಿ ರೋಗ ಇರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಕ್ಷಯರೋಗದಿಂದ ಜನರು ಸಾವನ್ನಪ್ಪುವುದನ್ನು ತಪ್ಪಿಲು ಜನರಿಗೆ ಈ ಕಾಯಿಲೆ ಬಗ್ಗೆ ಅರಿವು ಮೂಡಿಸಲಾಗುವುದು.

2022ರಲ್ಲಿ ' 'Invest to End TB. Save Lives' ಟಿಬಿಯನ್ನು ಕೊನೆಯಾಗಿಸಿ, ಜೀವವನ್ನು ಉಳಿಸಿ ಎಂಬ ಧ್ಯೇಯ್ಯದೊಂದಿಗೆ ಕ್ಷಯ ರೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ.

ಟಿಬಿ ವಿಶ್ವದಲ್ಲಿರುವ ಮಾರಾಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದೆ. ಕ್ಷಯರೋಗದಿಂದಾಗಿ ದಿನದಲ್ಲಿ 4000 ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಸುಮಾರು 28, 000ಕ್ಕೂ ಅಧಿಕ ಜನರು ಇದರಿಂದಾಗಿ ಕಾಯಿಲೆ ಬೀಳುತ್ತಿದ್ದಾರೆ. 2000 ಇಸವಿಯಿಂದ 63 ಮಿಲಿಯನ್ ಜನರು ಟಿಬಿ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2016ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಆ ವರ್ಷ 10.4 ಮಿಲಿಯನ್‌ ಜನರಿಗೆ ಕ್ಷಯರೋಗ ಬಂದಿತ್ತು, ಅದರಲ್ಲಿ 1.7 ಮಿಲಿಯನ್‌ ಜನರು ಕ್ಷಯರೋಗಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಕ್ಷಯರೋಗದ ಬಗ್ಗೆ ನಿರ್ಲಕ್ಷ್ಯ ಅಪಾಯಕಾರಿ.

ಕ್ಷಯ ರೋಗ ಬಂದರೆ ಸಂಪೂರ್ಣ ಗುಣಪಡಿಸಬಹುದೇ? ಇದಕ್ಕೆ ಚಿಕಿತ್ಸೆ ತುಂಬಾ ಸಮಯ ಮಾಡಬೇಕು ಏಕೆ? ಕ್ಷಯ ರೋಗಕ್ಕೂ ಹಾಗೂ ಕೋವಿಡ್‌ 19ಗೂ ಸಂಬಂಧವಿದೆಯೇ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

ಕ್ಷಯರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಬಹುದೇ? 

ರೋಗಿಯು ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡರೆ ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.

ಕ್ಷಯ ರೋಗಕ್ಕೆ ತುಂಬಾ ಸಮಯ ಚಿಕಿತ್ಸೆ ಮಾಡಬೇಕು?

 ಕ್ಷಯ ರೋಗದಿಂದ ಸಮಪೂರ್ಣವಾಗಿ ಗುಣಮುಖರಾಗಲು 6 ತಿಂಗಳು ಚಿಕಿತ್ಸೆ ಪಡೆಯಬೇಕಾಗುತ್ತದೆ. ಟಿಬಿ ಯಾವ ರೀತಿ ಇದೆ ಅದಕ್ಕೆ ಅನುಗುಣವಾಗಿ ಚಿಕಿತ್ಸೆ ಇರುತ್ತದೆ, ಕೆಲವರಿಗೆ ಇನ್ನೂ ಹೆಚ್ಚಿನ ಸಮಯ ಚಿಕಿತ್ಸೆ ನೀಡಬೇಕಾಗುತ್ತದೆ. ಟಿಬಿಗೆ ಚಿಕಿತ್ಸೆ ಪಡೆದು 2 ತಿಂಗಳುವಾಗುವಷ್ಟರಲ್ಲಿ ಕಲ್ಚರ್‌ ರಿಸಲ್ಟ್ ನೆಗೆಟಿವ್‌ ಬರಬಹುದು, ಆದರೆ ಲ್ಯಾಟೆಂಟ್‌ ಬ್ಯಾಕ್ಟಿರಿಯಾ ಮರುಕಳಿಸುವ ಸಾಧ್ಯತೆ ಇರುವುದರಿಂದ ಟಿಬಿ ಚಿಕಿತ್ಸೆಯನ್ನು ದೀರ್ಘಾವಧಿಯವರೆಗೆ ನೀಡಲಾಗುವುದು.

ಟಿಬಿ ರೋಗಿಗಳಿಗೆ ಚಿಕಿತ್ಸೆಗೆ ಸರ್ಕಾರದಿಂದ ಏನಾದರೂ ಪ್ರಯೋಜನ ಸಿಗುವುದೇ? 

* ಟಿಬಿ ಪರೀಕ್ಷೆ ಹಾಗೂ ಅದಕ್ಕೆ ಔಷಧಿ ಪ್ರತಿಯೊಬ್ಬ ಟಿಬಿ ರೋಗಿಗೆ ಉಚಿತವಾಗಿ ದೊರೆಯಲಾಗುವುದು. ರೋಗಿ ಯಾವುದೇ ಹಣ ಖರ್ಚು ಮಾಡಬೇಕಾಗಿಲ್ಲ. ರೋಗಿ ಹೋಗಿ ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದರೂ ಇದಕ್ಕೆ ನೀಡುವ ಚಿಕಿತ್ಸೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ರೀತಿ ಇರುತ್ತದೆ. * ನೋಂದಣಿ ಮಾಡಿದ ಕ್ಷಯರೋಗಿಗೆ ಭಾರತ ಸರ್ಕಾರ ಪ್ರತಿತಿಂಗಳು ರೂ. 500 ಸಹಾಯಧನ ನೀಡುವುದು. ಈ ಸಹಾಯಧನ ಚಿಕಿತ್ಸೆ ಪಡೆಯುತ್ತಿರುವವರೆಗೆ ದೊರೆಯುತ್ತದೆ, ಕೆಲವರಿಗೆ 2 ವರ್ಷದವರೆಗೆ ದೊರೆಯುವುದು. * ಸರ್ಕಾರ ಕ್ಷಯರೋಗಿಗಳ ಆರೋಗ್ಯದ ಮೇಲೆ ನಿಗಾ ಇಡುತ್ತದೆ, ಅವರು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಅಗ್ಯತವಿರುವ ಚಿಕಿತ್ಸೆ ಹಾಗೂ ಔಷಧಿಯನ್ನು ನೀಡಲಾಗುವುದು. * ಇನ್ನು ಕ್ಷಯ ರೋಗಕ್ಕೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರಿಗೆ ಪ್ರೋತ್ಸಾಹಕ ಧನ ನೀಡಲಾಗುವುದು.
ಕ್ಷಯರೋಗ ಮರುಕಳಿಸಬಹುದೇ? 

ಶೇ 10-12ರಷ್ಟು ರೋಗಿಗಳು ಕ್ಷಯರೋಗದಿಂದ ಗುಣಮುಖವಾದ ಸ್ವಲ್ಪ ಸಮಯದ ಬಳಿಕ ಮತ್ತೆ ಮರುಕಳಿಸಬಹುದು. ಆದ್ದರಿಂದ ಕ್ಷಯರೋಗದಿಂದ ಗುಣಮುಖರಾದವರಿಗೆ ಪ್ರತೀ ಆರು ತಿಂಗಳಿಗೆ ಬಂದು ಪರೀಕ್ಷೆ ಮಾಡಲಾಗುವುದು. ಈ ರೀತಿ ಎರಡು ವರ್ಷ ಮಾಡಬೇಕಾಗುತ್ತದೆ.

ಟಿಬಿ ಮತ್ತು ಕೋವಿಡ್‌ 19 ನಡುವೆ ಸಂಬಂಧವಿದೆಯೇ? ಟಿಬಿ ಮತ್ತು ಕೋವಿಡ್‌ 19ಗೆ ಸಂಬಂಧವಿದೆಯೇ ಎಂದು ನೋಡುವುದಾದರೆ ನೇರವಾಗಿ ಸಂಬಧವಿರುವ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಲ್ಲ. ಆದರೆ ಕೋವಿಡ್‌ 19 ಸಾಂಕ್ರಾಮಿಕ ಸಮಯದಲ್ಲಿ ಅತೀ ಹೆಚ್ಚು ಟಿಬಿ ಕೇಸ್‌ಗಳು ಪತ್ತೆಯಾಗಿತ್ತು. ಎರಡೂ ಕಾಯಿಲೆಗಳ ಲಕ್ಷಣ ಕೆಮ್ಮು ಆಗಿರುವುದರಿಂದ ಕೋವಿಡ್‌ 19 ಪರೀಕ್ಷೆ ಜೊತೆಗೆ ಟಿಬಿ ಪರೀಕ್ಷೆಯೂ ಮಾಡಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಕೋವಿಡ್ 19 ಲಾಕ್‌ಡೌನ್‌ ಸಮಯದಲ್ಲಿ ಜನರು ಹೊರಗಡೆ ಹೋಗುತ್ತಿರಲಿಲ್ಲ, ಇತರ ಆರೋಗ್ಯ ಸಮಸಯೆ ಇರುವವರು ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಈ ಸಮಯದಲ್ಲಿ ಎಷ್ಟೋ ಟಿಬಿ ರೋಗಿಗಳು ಸರಿಯಾಗಿ ಚಿಕಿತ್ಸೆ ಪಡೆದಿಲ್ಲ, ಇದರಿಂದಾಗಿ ಸಮಸಯೆ ಉಂಟಾಗಿತ್ತು.

ಟಿಬಿ ಔಷಧಿಯ ಅಡ್ಡಪರಿಣಾಮಗಳೇನು? * ಯಾವುದೇ ಔಷಧಿಯಾಗಲಿ ತುಂಬಾ ಸಮಯ ತೆಗೆದುಕೊಂಡರೆ ಅಡ್ಡಪರಿಣಾಮ ಇದ್ದೇ ಇರುತ್ತದೆ. * ಮೈಯಲ್ಲಿ ತುರಿಕೆ ಇರುತ್ತದೆ: ಮೈಗೆ ತೆಂಗಿನೆಣ್ಣೆ ಹಾಗೂ ಮಾಯಿಶ್ಚರೈಸರ್ ಬಳಸಿ * ಕಣ್ಣುಗಳು ಮಂಜಾಗುವುದು: ನಿಮಗೆ ಕಣ್ಣುಗಳಲ್ಲಿ ಏನಾದರೂ ತೊಂದರೆಯಾದರೆ ಕೂಡಲೇ ವೈದ್ಯರನ್ನು ಕಾಣಿ. * ಕೆಲವರಿಗೆ ಕಿವಿ ಕೇಳಿಸದಾಗುವುದು, ಥೈರಾಯ್ಡ್ ಸಮಸ್ಯೆ ಹಾಗೂ ಕಾಲು ಸಂಧುಗಳಲ್ಲಿ ನೋವು ಕಂಡು ಬರುವುದು.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries