ಬೇಸಿಗೆಯಲ್ಲಿ ಮೈ ಬೆವರುವುದು ಸಹಜ. ಆದರೆ ತುಂಬಾ ಬೆವರಿದರೆ ಮೈ ದುರ್ವಾಸನೆ ಬೀರುವುದು, ಇದರಿಂದ ಹೊರಗಡೆ ಹೋದಾಗ ಜನರ ಜೊತೆ ಬೆರೆಯುವಾಗ ಒಂಥರಾ ಹಿಂಜರಿಕೆ ಉಂಟಾಗುವುದು. ಡಿಯೋಡ್ರೆಂಟ್ ಬಳಸಿದರೂ ವಿಪರೀತ ಬೆವರಿದರೆ ಪ್ರಯೋಜನವಿಲ್ಲ, ಡಿಯೋಡ್ರೆಂಟ್ ಜೊತೆ ಮಿಶ್ರವಾಗಿ ಮತ್ತಷ್ಟು ದುರ್ವಾಸನೆ ಬೀರಬಹುದು.
ಮನೆಯಲ್ಲಿ ಇದ್ದರೆ ಮೈ ಅಷ್ಟು ಬೆವರುವುದಿಲ್ಲ, ಫ್ಯಾನ್ ಕೆಳಗಡೆ ಕೂರಬಹುದು, ಮೈ ದುರ್ವಾಸನೆ ಬೀರುತ್ತಿದ್ದರೆ ತಣ್ಣೀರಿನಲ್ಲಿ ಸ್ನಾನ ಮಾಡಿ ಬಂದು ರಿಲ್ಯಾಕ್ಸ್ ಆಗಬಹುದು. ಆದರೆ ಆಫೀಸ್‌ಗೆ ಹೋದಾಗ ಅಥವಾ ಯಾವುದಾರೂ ಸಮಾರಂಭಕ್ಕೆ ಹೋದಾಗ ಮೈ ತುಂಬಾ ಬೆವರುತ್ತಿದ್ದರೆ ತುಂಬಾ ಕಿರಿಕಿರಿ ಅನಿಸುವುದು. ಬೇಸಿಗೆಯಲ್ಲಿ ಈ ಆಹಾರಗಳನ್ನು ಸೇವಿಸುವುದರಿಂದ ಮೈ ತುಂಬಾ ಬೆವರುವುದು ಹಾಗೂ ದುರ್ವಾಸನೆಯನ್ನು ತಡೆಗಟ್ಟಬಹುದು ನೋಡಿ:ಅದರಲ್ಲೂ ಈ ಸಮಸ್ಯೆ ಇರುವವರಿಗೆ ಮೈ ಬೆವರುವ ಸಮಸ್ಯೆ ಅಧಿಕವಿರುತ್ತದೆ:
* ಮೆನೋಪಾಸ್ * ಮಧುಮೇಹ * ಫಂಗಲ್ ಸೋಂಕು (Athlete's foot) * ಕಡಿಮೆ ರಕ್ತದೊತ್ತಡ * ಥೈರಾಯ್ಡ್ ಸಮಸ್ಯೆ (ಹೈಪರ್ ಥೈರಾಯ್ಡ್) * ಲುಕೆಮಿಯಾ * ಕೆಲವೊಂದು ಔಷಧಿಗಳ ಅಡ್ಡಪರಿಣಾಮ * ಮಾನಸಿಕ ಒತ್ತಡ, ಖಿನ್ನತೆ * ಶುಚಿತ್ವದ ಸಮಸ್ಯೆ
ಈ ಆಹಾರಗಳು ಮೈ ದುರ್ವಾಸನೆ ತಡೆಗಟ್ಟಲು ಸಹಕಾರಿ
ಈ ಆಹಾರಗಳು ಮೈ ದುರ್ವಾಸನೆ ತಡೆಗಟ್ಟಲು ಸಹಕಾರಿ
1. ನೀರು
ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯಿರಿ. ದಿನದಲ್ಲಿ 8 ಲೋಟ ನೀರು ಕುಡಿಯಲೇಬೇಕು, ಅದರಲ್ಲೂ ಬೇಸಿಗೆಯಲ್ಲಿ ಇನ್ನೂ ಎರಡು ಲೋಟ ಅಧಿಕ ಕುಡಿಯಿರಿ. ದೇಹದಲ್ಲಿ ನೀರಿನಂಶ ಕಾಪಾಡುವುದರಿಂದ ಬೆವರುವುದು ಕಡಿಮೆಯಾಗುವುದು.
2. ಅತ್ಯಧಿಕ ನಾರಿನಂಶ ಇರುವ ಆಹಾರ ಸೇವಿಸಿ
ನಾರಿನಂಶ ಅಧಿಕವಿರುವ ಆಹಾರಗಳು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಅಲ್ಲದೆ ದೇಹದ ಉಷ್ಣತೆಯನ್ನು ಕಾಪಾಡುವಲ್ಲಿಯೂ ಇಂಥ ಆಹಾರಗಳು ಸಹಕಾರಿ, ಜೊತೆಗೆ ಮೈ ಬೆವರುವುದು ಕೂಡ ಕಡಿಮೆಯಾಗುವುದು.
3. ಆಲೀವ್ ಎಣ್ಣೆ
3. ಆಲೀವ್ ಎಣ್ಣೆ
ಆಲೀವ್ ಎಣ್ಣೆ ಚಯಪಚಯ ಕ್ರಿಯೆಗೆ ಹಾಗೂ ಜೀರ್ಣಕ್ರಿಯೆಗೆ ಸಹಕಾರಿ. ಆಲೀವ್ ಎಣ್ಣೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಇದು ಮೈ ಹೆಚ್ಚು ಬೆವರುವುದನ್ನು ತಡೆಗಟ್ಟುತ್ತೆ.
4. ಹಣ್ಣುಗಳು
ಹಣ್ಣುಗಳಾದ ಸೇಬು, ದ್ರಾಕ್ಷಿ, ಕಲ್ಲಂಗಡಿ ಹಣ್ಣು, ಅನಾನಸ್ ಹಾಗೂ ಕಿತ್ತಳೆ ಈ ಬಗೆಯ ಹಣ್ಣುಗಳನ್ನು ತಿನ್ನುವುದರಿಂದ ಮೈ ಬೆವರುವುದು, ದುರ್ವಾಸನೆ ಎಲ್ಲಾ ಕಡಿಮೆಯಾಗುವುದು, ಅಲ್ಲದೆ ಈ ಹಣ್ಣುಗಳನ್ನು ತಿಂದಾಗ ಬೆವರಿದರೂ ಬೆವರು ವಾಸನೆ ತುಂಬಾ ಕಟುವಾಗಿರಲ್ಲ.
5. ತರಕಾರಿಗಳು
5. ತರಕಾರಿಗಳು
ಬೇಸಿಗೆಯಲ್ಲಿ ಸೆಲರಿ, ಲೆಟ್ಯೂಸೆ, ರೆಡ್ ಕ್ಯಾಬೇಜ್, ಪಾಲಾಕ್, ಸೌತೆಕಾಯಿ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇವುಗಳು ಮೈ ದುರ್ವಾಸನೆ ತಡೆಗಟ್ಟುವುದು.
6.ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಇದು ನರಗಳನ್ನು ಕೂಲ್ ಆಗಿ ಇಡುವುದು, ಇದರಿಂದ ಮೈ ತುಂಬಾ ಬೆವರುವುದು ಕಡಿಮೆಯಾಗುವುದು.
ಮೈ ದುರ್ವಾಸನೆ ತಡೆಗಟ್ಟಲು ಟಿಪ್ಸ್
ಮೈ ದುರ್ವಾಸನೆ ತಡೆಗಟ್ಟಲು ಟಿಪ್ಸ್
1.ಕಲ್ಲುಪ್ಪು: ಹದ ಬಿಸಿ ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಕಿ, ಅದು ಕರಗಿದ ಮೇಲೆ ಅದರಲ್ಲಿ ಸ್ನಾನ ಮಾಡಿ, ಹೀಗೆ ಮಾಡಿದರೆ ಬೆವರಿನ ದುರ್ವಾಸನೆ ತಡೆಗಟ್ಟುತ್ತೆ. 2. ಆ್ಯಪಲ್ ಸಿಡೆರ್ ವಿನೆಗರ್ ಸ್ಪ್ರೇ: 1ಕಪ್ ಆ್ಯಪಲ್‌ಸಿಡೆರ್ ವಿನೆಗರ್ ಅನ್ನು ಅರ್ಧ ಕಪ್ ನೀರಿನೊಂದಿಗೆ ಮಿಕ್ಸ್ ಮಾಡಿ ಅದನ್ನು ಸ್ಪ್ರೇ ಬಾಟಲಿನಲ್ಲಿ ಹಾಕಿ ಮಲಗುವ ಮುನ್ನ ಕಂಕುಳ ಕೆಳಗಡೆ ಸ್ಪ್ರೇ ಮಾಡಿ, ಬೆಳಗ್ಗೆ ಹಸ ಬಿಸಿ ನೀರಿನಲ್ಲಿ ಮೈ ತೊಳೆಯಿರಿ.





